

ಜಮ್ಮು: ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ಡ್ರೋನ್ನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಹೊಡೆದುರುಳಿಸಿದ್ದಾರೆ.
ಇಂದು ಮುಂಜಾನೆ 5.10ಕ್ಕೆ ಘಟನೆ ನಡೆದಿದೆ. ಪಾಕ್ ಡ್ರೋನ್ ಆಕಾಶದಲ್ಲಿ ಅತ್ತಿಂದತ್ತ ಹಾರಾಡುತ್ತಿತ್ತು. ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಡ್ರೋನ್ನ್ನು ಪಾನ್ಸಾರ್ ಪೋಸ್ಟ್ ಸಮೀಪ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ರಾಹುಲ್ ಗಾಂಧಿಗೆ ಎರಡು ಅನುಮಾನ; ಪ್ರಧಾನಿಗೆ ಪ್ರಶ್ನೆ
ಭಾರತೀಯ ಭೂಪ್ರದೇಶದ ಒಳಗೆ 250 ಮೀ.ಎತ್ತರದಲ್ಲಿ ಹಾರಾಡುತ್ತಿದ್ದ ಡ್ರೋನ್ನತ್ತ ಬಿಎಸ್ಎಫ್ ಯೋಧರು 9 ಬಾರಿ ಫೈರಿಂಗ್ ಮಾಡಿದ ಬಳಿಕ, ಅದು ಕೆಳಗೆ ಬಿದ್ದಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. (ಏಜೆನ್ಸೀಸ್)