ಪಾಕ್ ಸೇನೆ ಮೊದಲ ಮಹಿಳಾ ಲೆಫ್ಟಿನೆಂಟ್ ಜನರಲ್ ನೇಮಕ

Nigar Johar
Published on

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಸ್ಥಾನಕ್ಕೆ ಮೊದಲ ಬಾರಿ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ನಿಗಾರ್ ಜೋಹರ್ ಈ ಸ್ಥಾನ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ನಿಗಾರ್ ಜೋಹರ್ ಅವರು 2017ರಲ್ಲಿ ಮೇಜರ್ ಜನರಲ್ ಆಗಿ ನೇಮಕಗೊಂಡಿದ್ದರು. ಮೇಜರ್ ಜನರಲ್ ಸ್ಥಾನಕ್ಕೇರಿದ ಮೂರನೇ ಮಹಿಳೆ ಇವರಾಗಿದ್ದರು. ಇವರ ತಂದೆ ಕರ್ನಲ್ ಖಾದಿರ್ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್​ಐ) ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ನಿಗಾರ್ ಜೋಹರ್ ಅವರ ಸಾಧನೆಯು ರಾಷ್ಟ್ರದ ಹೆಣ್ಣು ಮಕ್ಕಳಿಗೆ ಸ್ಪೂರ್ತಿ. ಅವರನ್ನು ನೋಡಿ ಹೆಣ್ಣು ಮಕ್ಕಳು ದೇಶದ ಸೇವೆ ಸಲ್ಲಿಸಲು ಮುಂದೆ ಬರಬೇಕು ಎಂದು ಅನೇಕ ರಾಜಕೀಯ ಮುಖಂಡರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net