

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪರಿಕಲ್ಪನೆಯ ಸರ್ಕಾರಿ ಶಾಲೆ- ಕಾಲೇಜುಗಳಿಗೆ ಬಣ್ಣ ಹಚ್ಚುವ ಬಣ್ಣದರ್ಪಣೆ ಅಭಿಯಾನದಡಿ ತಾಲೂಕಿನ ನರೇಂದ್ರ ಗ್ರಾಮದ 7 ಶಾಲೆಗಳಿಗೆ ಗುರುವಾರ ಬಣ್ಣ ವಿತರಿಸಲಾಯಿತು. ಸಂಸದ ಪ್ರಲ್ಹಾದ ಜೋಶಿಯವರ ಪೋಷಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ನಾಗೇಶ ಹಟ್ಟಿಹೋಳಿ, ಉಪಾಧ್ಯಕ್ಷೆ ಮಲ್ಲವ್ವ ವಾಲೀಕಾರ ಹಾಗೂ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರಿದ್ದರು.