ಪಹಲ್ಗಾಮ್ ಭಯೋತ್ಪಾದಕ ದಾಳಿ; ತುರ್ತು ಸಭೆ ಕರೆದ ಪಾಕಿಸ್ತಾನ ಪ್ರಧಾನಿ| Shahbaz Sharif

Untitled design (1)
Published on

Shahbaz Sharif | ಪಹಲ್ಗಾಂ ದಾಳಿ ಪರಿಣಾಮ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿರುವ ಭಾರತ ಸರ್ಕಾರದ ಕ್ರಮಕ್ಕೆ ಪ್ರತ್ಯುತ್ತರ ನೀಡಲು ಪಾಕಿಸ್ತಾನ ಇಂದು (24) ತುರ್ತು ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿದೆ.

ಪಾಕ್ ಪ್ರಧಾನಿ ಶಹಬಾಜ್ ಷರೀಫ್, ರಕ್ಷಣಾ ಸಚಿವ ಖವಾಜಾ ಆಸಿಫ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಎಲ್ಲಾ ಇಲಾಖೆಯ ಮುಖ್ಯಸ್ಥರೂ ಭಾಗಿಯಾಗಲಿದ್ದಾರೆ. ಇನ್ನೂ ಈ ಸಭೆಯಲ್ಲಿ ಭಾರತಕ್ಕೆ ಸರಿಯಾಗಿ ಉತ್ತರಿಸುವ ಯೋಜನೆ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಭಾರತ ಬುಧವಾರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ನಂತರ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಗಡಿಯಾಚೆಗಿನ ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸುವುದಾಗಿ ಘೋಷಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ತಡರಾತ್ರಿ ಖಾಸಗಿ ಟೆಲಿವಿಷನ್ ಚಾನೆಲ್​ನೊಂದಿಗೆ ಮಾತನಾಡಿದ ಇಶಾಕ್ ದಾರ್ ಅವರು, ಭಾರತದ ತೀರ್ಮಾನವನ್ನು ಅಪ್ರಬುದ್ಧ ಎಂದು ಕರೆದಿದ್ದಾರೆ. ಭಾರತ ಯಾವುದೇ ಪುರಾವೆಗಳನ್ನು ನೀಡಿಲ್ಲ. ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಯಾವುದೇ ಪ್ರಬುದ್ಧತೆಯನ್ನು ತೋರಿಸಿಲ್ಲ ಎಂದು ದಾರ್ ಹೇಳಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net