Pahalgaon Attack; ಕಣಿವೆ ರಾಜ್ಯದಲ್ಲಿ ದಾಳಿಕೋರರಿಗೆ ತೀವ್ರ ಶೋಧ: 1,500 ಜನರು ವಶಕ್ಕೆ!

dk-2025-04-23t222004107-68091a45cb457
Published on

Pahalgaon Attack : ಪಹಲ್ಗಾವ್​ ಉಗ್ರರ ದಾಳಿ​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ 1500 ಕ್ಕೂ ಅಧಿಕ ಶಂಕಿತರನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ದಾಳಿ ಮಾಡಿದ ಉಗ್ರರ ಶೋಧಕ್ಕೆ ಜಮ್ಮು-ಕಾಶ್ಮೀರ ಪೊಲೀಸರು, ಕೇಂದ್ರಿಯ ಮೀಸಲು ಪಡೆ ಸೇರಿದಂತೆ ಭದ್ರತಾ ಪಡೆಗಳು ಕಾಶ್ಮೀರದ್ಯಂತ ತೀವ್ರ ಶೋಧ ಕಾರ್ಯ ಮಾಡುತ್ತಿವೆ. ಉಗ್ರರ ಸುಳಿವು ಕಂಡುಹಿಡಿಯಲು ನೂರಾರು ಶಂಕಿತನ್ನು ಬಂಧಿಸಿದೆ.

ಪಹಲ್ಗಾಮ್​ಗೆ ಬಂದು ಪ್ರವಾಸಿಗರನ್ನು ಹತ್ಯೆ ಮಾಡಲು ಉಗ್ರರಿಗೆ ಯಾರು ಆಶ್ರಯ ನೀಡಿದರು?, ಸಹಾಯ ಮಾಡಿದರು ಅಥವಾ ಶಸ್ತ್ರಾಸ್ತ್ರಗಳನ್ನು ಒದಗಿಸಿದರು ಎಂಬುದನ್ನು ಕಂಡುಹಿಡಿಯಲು ಈ ಎಲ್ಲ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳ ಮಾಹಿತಿಗಳನ್ನು ಒಟ್ಟುಗೂಡಿಸಿ, ಪ್ರತಿಯೊಬ್ಬ ಶಂಕಿತನ ಸಂಪರ್ಕಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net