Pahalgam Terror Attack; 16 ಯೂಟ್ಯೂಬ್ ಚಾನೆಲ್​ಗಳು​ ನಿಷೇಧ ಮಾಡಿದ ಕೇಂದ್ರ: ಕಾರಣ ಹೀಗಿದೆ..​

dk - 2025-04-28T113716.890
Published on

Pahalgam Terror Attack : ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ಏ.22ರಂದು ಭಯೋತ್ಪಾದಕರು ನಡೆದ ದಾಳಿ ಬಳಿಕ ಕೋಮು ಸೂಕ್ಷ್ಮತೆಯನ್ನು ಹರಡುತ್ತಿದ್ದ 16 ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳನ್ನು ಭಾರತ ಸರ್ಕಾರ ಬಂದ್ ಮಾಡಿದೆ ಎಂದು ಸೋಮವಾರ ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಕೆಲವೇ ದಿನಗಳ ನಂತರ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ.​

ಕಾರಣ ಏನು..?

ಸರ್ಕಾರಿ ಮೂಲಗಳ ಪ್ರಕಾರ, ಯೂಟ್ಯೂಬ್ ಚಾನೆಲ್‌ಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮವೆಂದು ಪರಿಗಣಿಸಲಾದ ವಿಷಯವನ್ನು ಹರಡುತ್ತಿವೆ. ಜತೆಗೆ ಭಾರತ, ಅದರ ಸೇನೆ ಮತ್ತು ಭದ್ರತಾ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಮತ್ತು ದಾರಿತಪ್ಪಿಸುವ ನಿರೂಪಣೆಗಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿವೆ. ಪಹಲ್ಗಾಮ್ ದುರಂತದ ನಂತರ ನೆರೆಹೊರೆಯವರ ನಡುವಿನ ಸಂಬಂಧಗಳು ಹದಗೆಟ್ಟಿರುವ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಬ್ಯಾನ್​ ಮಾಡಿರುವ ಚಾನಲ್​ಗಳಿವು..

ಜಿಯೋ ನ್ಯೂಸ್, ಡಾನ್, ರಫ್ತಾರ್, ಬೋಲ್ ನ್ಯೂಸ್, ಎಆರ್‌ವೈ ನ್ಯೂಸ್, ಸಮಾ ಟಿವಿ, ಸುನೋ ನ್ಯೂಸ್‌ನಂತಹ ಪ್ರಮುಖ ಸುದ್ದಿ ಸಂಸ್ಥೆಗಳ ಯೂಟ್ಯೂಬ್ ಚಾನೆಲ್‌ಗಳು ಸೇರಿವೆ.

ಇನ್ನು ಹೆಚ್ಚುವರಿಯಾಗಿ, ಮುನೀಬ್ ಫಾರೂಕ್, ಉಮರ್ ಚೀಮಾ, ಅಸ್ಮಾ ಶಿರಾಜಿ ಮತ್ತು ಇರ್ಷಾದ್ ಭಟ್ಟಿ ಸೇರಿದಂತೆ ಪ್ರಸಿದ್ಧ ಪತ್ರಕರ್ತರ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಉಜೈರ್ ಕ್ರಿಕೆಟ್, ದಿ ಪಾಕಿಸ್ತಾನ್ ರೆಫರೆನ್ಸ್, ರಾಜಿ ನಾಮಾ ಮತ್ತು ಸಮಾ ಸ್ಪೋರ್ಟ್ಸ್ ಸೇರಿದಂತೆ ಇತರ ನಿಷೇಧಿತ ಖಾತೆಗಳು ಈ ಪಟ್ಟಿಯಲ್ಲಿ ಸೇರಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net