ಬಿಹಾರ ಚುನಾವಣೆಗೆ ಪಹಲ್ಗಾಮ್ ಪ್ರಕರಣ ಬಳಕೆ: ಸಚಿವ ಸಂತೋಷ ಲಾಡ್ ಆರೋಪ | Strategy to cover up failure

Santosh Lad
Published on

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳನ್ನು ಹುಡುಕಿ ಉಗ್ರರು ಗುಂಡಿಕ್ಕಿ ಕೊಂದರು ಎಂಬ ಶಿವಮೊಗ್ಗದ ಮಹಿಳೆ ಹೇಳಿಕೆ ಅಲ್ಲಗಳೆಯಲಾಗದು. ಆದರೆ ಅಲ್ಲಿನ ಶೇ.90ರಷ್ಟು ಜನರು ಹಾಗೆ ನಡೆದಿಲ್ಲವೆನ್ನುತ್ತಿದ್ದು, ಆ ರೀತಿ ಸುಳ್ಳುವುದು ಸರಿಯಲ್ಲವೆಂದು ಸಚಿವ ಸಂತೋಷ ಲಾಡ್ ಆಕ್ಷೇಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಪುಲ್ವಾಮಾ ದಾಳಿ ಬಗ್ಗೆ ಬಿಜೆಪಿಯವರು ಈಗ ಯಾರೂ ಮಾತನಾಡುತ್ತಿಲ್ಲ. ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರ ಹತ್ಯೆ ಬಗ್ಗೆ ಬಿಹಾರದಲ್ಲಿ ಚರ್ಚೆಯಾಗುತ್ತಿದ್ದು, ಇದೇ ವಿಚಾರದ ಮೇಲೆ ಬಿಹಾರ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ತರಹೇವಾರಿ ತಂತ್ರಗಾರಿಕೆ

ಭಯೋತ್ಪಾದಕರ ದುಷ್ಕೃತ್ಯಕ್ಕೆ ಕೇಂದ್ರದ ಭದ್ರತಾ ವೈಲ್ಯವೇ ಕಾರಣ. ಇದನ್ನು ಮುಚ್ಚಿ ಹಾಕಲು ತರಹೇವಾಗಿ ತಂತ್ರಗಾರಿಕೆಯನ್ನು ಕೇಂದ್ರ ಹೆಣೆಯುತ್ತಿದೆ. ಸಿಂಧೂ ನದಿ ನೀರು ನಿಲ್ಲಿಸಲು ಸಾಧ್ಯವೆ ಎಂಬ ಬಗ್ಗೆ ಪರಾಮರ್ಶೆಯಾಗಿದೆಯೆ ?. ನಿರ್ಣಯ ಕೈಗೊಳ್ಳುವ ಮುನ್ನ ಮಾಧ್ಯಮಗಳಿಗೆ ಹರಿಬಿಟ್ಟು ದಾರಿ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಂತೋಷ ಲಾಡ್ ಟೀಕಿಸಿದರು.

ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ಈಗ ಧ್ವಂಸ ಮಾಡುತ್ತಿರುವುದು ಸುದ್ದಿಯಾಗುತ್ತಿದೆ. ಈ ಮೊದಲು ಭಯೋತ್ಪಾದಕರ ಮನೆಗಳು ಇದ್ದದ್ದು ಗೊತ್ತಿರಲಿಲ್ಲವೆ ?. ಬ್ಲಾಕ್‌ಚೈನ್, ಕೃತಕಬುದ್ಧಿಮತ್ತೆ ತಂತ್ರಜ್ಞಾನ, ಬಗ್ಗೆ ಹೇಳುವವರು ಅವುಗಳನ್ನು ಬಳಸಿಕೊಳ್ಳಲಿಲ್ಲವೇಕೆ ? ಎಂದು ಕೇಳಿದರು.

ದುಷ್ಕೃತ್ಯ ನಡೆದ ಸ್ಥಳದಲ್ಲಿ ಕನಿಷ್ಠ ಪಕ್ಷ ಡ್ರೋನ್ ಬಳಸಿ ನಿಗಾವ್ಯವಸ್ಥೆ ಮಾಡಿರಲಿಲ್ಲ. ಗುಂಡಿನ ದಾಳಿ ನಡೆದರೆ ಸೇನೆ ಹೋಗಲು ಎರಡು ತಾಸು ಬೇಕಾಗುತ್ತದೆ ಎಂದು ಹೇಳುತ್ತಾರೆ. ಭದ್ರತೆಗೆ ಯಾವ ರೀತಿ ವ್ಯವಸ್ಥೆ ಮಾಡಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ಹೋಗಿ ಭಾಷಣ ಮಾಡುತ್ತಾರೆ. ಕಾಶ್ಮೀರಕ್ಕೆ ಭೇಟಿ ನೀಡಿ ಕನಿಷ್ಠ ಮಾಧ್ಯಮಗೋಷ್ಠಿ ನಡೆಸಲಿಲ್ಲ. ೈಟರ್‌ಜೆಟ್‌ಗಳು ರೆಡಿಯಿವೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದ್ದು, ಮಾಧ್ಯಮದಲ್ಲಿ ಯುದ್ಧ ಶುರುವಾಗುತ್ತದೆ ಎಂದು ಸಂತೋಷ ಲಾಡ್ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net