

ಮೆಣಸಗಿ: ಶ್ರೀ ಲಿಂಗಬಸವೇಶ್ವರ ಪಗಡೆ ಸಂಘದ ವತಿಯಿಂದ ಈ ಬಾರಿಯೂ ಮಹಾಶಿವರಾತ್ರಿ ಪ್ರಯುಕ್ತ ರಾಜ್ಯಮಟ್ಟದ ಹೊನಲು ಬೆಳಕಿನ ಪಗಡೆ ಪಂದ್ಯಾವಳಿ ಫೆ.26ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಅಂದು ರಾತ್ರಿ 7.30ಕ್ಕೆ ಶ್ರೀ ಲಿಂಗೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಮುದಿಯಪ್ಪಯ್ಯ ಮಹಾಸ್ವಾಮೀಜಿ, ಶ್ರೀಗುರಯ್ಯ ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.