

Padma Awards 2025: ಈ ವರ್ಷದ ಜನವರಿ 25ರಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ ಕೇಂದ್ರ ಸರ್ಕಾರ, ಇಂದು (ಏ.28) ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಏಳು ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಈ ವಿಶೇಷ ಹಾಗೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರದಾನ ಮಾಡಿದೆ. 76ನೇ ಗಣರಾಜ್ಯೋತ್ಸವ ದಿನಕ್ಕೂ ಮೊದಲು ದೇಶದ ನಾಗರಿಕ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗೆ ಒಟ್ಟಾರೆ 139 ಗಣ್ಯ ವ್ಯಕ್ತಿಗಳ ಹೆಸರನ್ನು ಸರ್ಕಾರ ಅನಾವರಣಗೊಳಿಸಿತು.
1. ಒಸಾಮು ಸುಜುಕಿ (ಮರಣೋತ್ತರ) (ಸುಜುಕಿ ಸಂಸ್ಥೆ ಮಾಜಿ ಸಿಇಓ)
2. ಎಲ್. ಸುಬ್ರಮಣಿಯಂ (ಸಂಗೀತ ಕ್ಷೇತ್ರ)
3. ಡಾ. ನಾಗೇಶ್ವರ್ ರೆಡ್ಡಿ ( ಗ್ಯಾಸ್ಟ್ರೋಎಂಟರಾಲಜಿಸ್ಟ್ ವೈದ್ಯರು)
4. ಮಲಯಾಳಂ ಲೇಖಕ, ಸಿನಿಮಾ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ).
1. ಪಂಕಜ್ ಉಧಾಸ್
2. ಸುಶೀಲ್ ಕುಮಾರ್ ಮೋದಿ
3. ಪಿ.ಆರ್. ಶ್ರೀಜೇಶ್
4. ನಂದಮೂರಿ ಬಾಲಕೃಷ್ಣ
5. ಶೇಖರ್ ಕಪೂರ್
6. ಅಜಿತ್ ಕುಮಾರ್
7. ಪಂಕಜ್ ಪಟೇಲ್
8. ವಿನೋದ್ ಧಾಮ್
9. ಸಾಧ್ವಿ ರಿಥಂಬರ
10. ನಳಿ ಕುಪ್ಪುಸ್ವಾಮಿ ಚೆಟ್ಟಿ
11. ಜೋಸ್ ಚಾಕೊ ಪೆರಿಯಪ್ಪುರಂ
12. ಅನಂತ್ ನಾಗ್
13. ಜತೀನ್ ಗೋಸ್ವಾಮಿ
14. ರಾಮ್ ಬಹದ್ದೂರ್ ರೈ
15. ಕೈಲಾಶ ನಾಥ್ ದೀಕ್ಷಿತ್
16. ಶೋಭಾನ
17. ಮನೋಹರ್ ಜೋಶಿ
18. ಬಿಬೆಕ್ ದೆಬ್ರೋಯ್
19. ಎ. ಸೂರ್ಯ ಪ್ರಕಾಶ್