

ಜೀವನದಲ್ಲಿ ಕಷ್ಟ, ಹೋರಾಟಗಳೇ ಇದ್ದರೂ ಪರಾಭವದಿಂದ ಹಿಂದಡಿ ಇಡದೆ ಗೆಲುವಿನ ನಗೆ ಬೀರಿದವರು ಇವರು. ವನಸುಮಗಳಂತೆ ಅವರ ಪಾಡಿಗೆ ಅವರಿದ್ದರು. ಶಿಕ್ಷಣ, ಕಲೆ, ಸಾಹಿತ್ಯ, ವೈದ್ಯಕೀಯ ಹೀಗೆ ಮಹತ್ವದ ಕ್ಷೇತ್ರಗಳಲ್ಲಿ ಸಾಮಾನ್ಯರು ಅಸಾಮಾನ್ಯ ಸಾಧನೆ ಮಾಡಿ, ಪ್ರೇರಣೆ ನೀಡುವಂತಾದಾಗ ಪ್ರತಿಷ್ಠಿತ ಪದ್ಮ ಗೌರವವೇ ಅರಿಸಿಕೊಂಡು ಬಂದಿದೆ. ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ತೆರೆಮರೆ ಸಾಧಕರನ್ನು ಗುರುತಿಸಿ, ಪದ್ಮ ಪುರಸ್ಕಾರ ನೀಡುತ್ತಿದೆ. ಈ ವರ್ಷವೂ ಅದು ಮುಂದುವರಿದಿದೆ. ಅಂಥ ಅಪರೂಪದ ಕೆಲ ಸಾಧಕರ ಸಂಕ್ಷಿಪ್ತ ಪರಿಚಯ, ಸಾಧನೆಯ ಅವಲೋಕನ ಇಲ್ಲಿದೆ.
ಬದುಕಿಗೇ ಬಣ್ಣ ತುಂಬಿದ ದುಲಾರಿ
ಟರ್ನಿಂಗ್ ಪಾಯಿಂಟ್!: ಮಿಥಿಲಾ ಪೇಂಟಿಂಗ್ನ ಖ್ಯಾತ ಕಲಾವಿದೆ ಕರ್ಪರಿ ದೇವಿ ಮನೆಯಲ್ಲಿ ಕಸ ಗೂಡಿಸುವ ಕೆಲಸ ಸಿಕ್ಕಿತು ದುಲಾರಿಗೆ. ಕರ್ಪರಿ ದೇವಿ ಇವರ ಪ್ರತಿಭೆ ಗುರುತಿಸಿ, ತರಬೇತಿ ನೀಡಿ ಪ್ರೋತ್ಸಾಹಿಸಿದರು.
106 ವರ್ಷದ ಕೃಷಿ ಸಾಧಕಿ!
10 ಎಕರೆ ನಿರ್ವಹಿಸುವುದು ಕಷ್ಟವಾಗುತ್ತಿದ್ದಂತೆ ಒಂದಿಷ್ಟು ಜಮೀನನ್ನು ಮಾರಿ, 2.5 ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಈ ಅಜ್ಜಿಯ 100ನೇ ಜನ್ಮದಿನವನ್ನು ಇಡೀ ಗ್ರಾಮವೇ ಸಂಭ್ರಮದಿಂದ ಆಚರಿಸಿದ್ದು, 3 ಸಾವಿರ ಜನರು ಅದರಲ್ಲಿ ಪಾಲ್ಗೊಂಡಿದ್ದರು.
ಜಾನಪದ ಸಂಗೀತದ ಸಿರಿ
ಜ್ಞಾನದ ಬೆಳಕು ಹರಡುತ್ತಿರುವ ಶುಕ್ಲ
ವಿದ್ಯಾದಾನ ಮಾಡುವ ಬಡವರ ಮೇಷ್ಟ್ರು
ಲಕ್ಷಾಂತರ ಜನರ ಸೇವೆ ಮಾಡಿದ ಹಳ್ಳಿ ವೈದ್ಯ
ಮೌಢ್ಯದ ವಿರುದ್ಧ ಹೋರಾಟದ ಜ್ವಾಲೆ
ಎಷ್ಟೊಂದು ದೌರ್ಜನ್ಯ ಸಹಿಸಿದರು!: ಊರಿನವರು ಇವರನ್ನು ಡಾಯನ್ ಎಂದು ಕರೆದು ಮರಕ್ಕೆ ಕಟ್ಟಿ, ಅರೆನಗ್ನಗೊಳಿಸಿ ಮನಸ್ಸಿಗೆ ಬಂದಂತೆ ಥಳಿಸಿದರು. ಮಲಮೂತ್ರ ಕುಡಿಸಿದರು. ಮನೆ ಮೇಲೆ ದಾಳಿ ನಡೆಸಿ, ಕೊಲ್ಲಲು ಯತ್ನಿಸಿದರು. ಆದರೆ, ಈ ಎಲ್ಲ ಅವಮಾನ ಮತ್ತೊಬ್ಬ ಮಹಿಳೆ ಪಾಲಿಗೆ ಬರಬಾರದು ಎಂದು ಸಂಕಲ್ಪಿಸಿ, ಮಹಿಳೆಯರ ತಂಡವನ್ನೇ ಕಟ್ಟಿಕೊಂಡಿದ್ದಾರೆ ಛುಂಟನಿ. ಸುತ್ತಮುತ್ತಲಲ್ಲಿ ಎಲ್ಲಾದರೂ ಮಹಿಳಾ ಶೋಷಣೆಯ ದೂರು ಬಂದರೆ 62 ಮಹಿಳೆಯರ ತಂಡ ಹೋಗಿ, ಅಲ್ಲಿ ವನಿತೆಗೆ ನ್ಯಾಯ ಕಲ್ಪಿಸುತ್ತದೆ. ಅಕ್ಷರ ಓದದಿದ್ದರೂ ಛುಂಟನಿ ದೇವಿ ಹಿಂದಿ, ಬಂಗಾಳಿ, ಒಡಿಶಿ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದಾರೆ.