ಪಾಡೀಶ್ವರಂಡ ನಡೆಲೋರ್ ಸ್ವರ ಧ್ವನಿಸುರುಳಿ ಬಿಡುಗಡೆ

13.npk--4.
ಕಕ್ಕಬೆ ಪಾಡಿ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ಪಾಡೀಶ್ವರಂಡ ನಡೆಲೋರ್ ಸ್ವರ ಕೊಡವ ಹಾಡಿನ ಧ್ವನಿಸುರುಳಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಸುಬ್ರಮಣಿ ಕಾವೇರಪ್ಪ ,ಕ್ಯಾಪ್ಟನ್ ಬಿದ್ದಂಡ ನಾಣಿದೇವಯ್ಯ ಇತರರಿದ್ದರು.
Published on

ನಾಪೋಕ್ಲು: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ಪಾಡೀಶ್ವರಂಡ ನಡೆಲೋರ್ ಸ್ವರ ಕೊಡವ ಹಾಡಿನ (ಕೃತಿ)ಧ್ವನಿಸುರುಳಿಯನ್ನು ಗುರುವಾರ ಬಿಡುಗಡೆ ಮಾಡಲಾಯಿತು.

ಕೊಕೇರಿ ಗ್ರಾಮದ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಇಗ್ಗುತ್ತಪ್ಪ ದೇವರ ಕುರಿತು ರಚಿಸಿದ ಕೊಡವ ಹಾಡಿನ ಧ್ವನಿಸುರುಳಿಯನ್ನು ದೇವಾಲಯದ ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘದ ಅಧ್ಯಕ್ಷ , ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಲೋಕಾರ್ಪಣೆಗೊಳಿಸಿದರು. ಕ್ಯಾಪ್ಟನ್ ಬಿದ್ದಂಡ ನಾಣಿದೇವಯ್ಯ ಕೊಡವ ಭಾಷೆಯ ಮೇಲೆ ಅಭಿಮಾನವಿಟ್ಟು ಇಗ್ಗುತ್ತಪ್ಪ ದೇವರ ಕುರಿತು ಉತ್ತಮ ಸಾಹಿತ್ಯ ಬರೆದಿದ್ದಾರೆ. ಈ ಪದ್ಯಗಳನ್ನು ಕರುಣ್-ಕಾವೇರಪ್ಪ ಹಾಡಿದು,್ದ ನಾಣಿದೇವಯ್ಯ ಅವರಿಂದ ಇನ್ನು ಹೆಚ್ಚಿನ ಸಾಹಿತ್ಯ ರಚನೆಯಾಗಲಿ. ಈ ಪುಣ್ಯಭೂಮಿಯಲ್ಲಿ ಮತ್ತಷ್ಟು ಸಾಹಿತ್ಯ ಕೃತಿಗಳು ಹೊರಬಂದು ಅಜರಾಮರವಾಗಲೆಂದು ಶುಭ ಹಾರೈಸಿದರು.

ರಚನೆಗಾರ ಕ್ಯಾಪ್ಟನ್ ಬಿದ್ದಂಡ ನಾಣಿದೇವಯ್ಯ, ಹಾಡುಗಾರ ಕರುಣ್-ಕಾವೇರಪ್ಪ, ,ಭಕ್ತ ಜನ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net