ರೋಗದಿಂದ ಬಚಾವಾದ ಭತ್ತದ ಬೆಳೆ

IMG-20200611-WA0005 (1)
Published on

ತಲಕಾಡು: ಈ ಬಾರಿ ಬೇಸಿಗೆ ಭತ್ತದ ಫಸಲನ್ನು ತಲಕಾಡು ಹೋಬಳಿಯ 143 ಹೆಕ್ಟೇರ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ರೈತರು ಯಶಸ್ವಿಯಾಗಿ ಬೆಳೆದಿದ್ದಾರೆ.

ಈ ನಡುವೆ, ಭತ್ತದ ಬೆಳೆಗೆ ಅಲ್ಲಲ್ಲಿ ಗಂಧಿಬಾಗ್ ಹಾಗೂ ಕೊಳೆರೋಗ ಕಾಣಿಸಿಕೊಂಡಿತ್ತು. ಆದರೆ, ಕೃಷಿ ಇಲಾಖೆ ಸಲಹೆ ಮೇರೆಗೆ ಸಕಾಲದಲ್ಲಿ ಔಷಧ ಸಿಂಪಡಿಸುವ ಮೂಲಕ ರೈತರು ಬೆಳೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಇದಲ್ಲದೆ, ಹೋಬಳಿಯ 1950 ಹೆಕ್ಟೇರ್ ವ್ಯಾಪ್ತಿಯಲ್ಲಿ ಮಳೆಯಾಶ್ರಿತವಾಗಿ ದ್ವಿದಳ ಧಾನ್ಯದ ಬೆಳೆದ ರೈತರು ಮೇ ತಿಂಗಳ ಅಂತ್ಯದಲ್ಲಿ ಸುರಿದ ಅಧಿಕ ಮಳೆಯಿಂದ ನಷ್ಟಕ್ಕೆ ಸಿಲುಕಿದ್ದಾರೆ.

ಹಳ್ಳದ ಗದ್ದೆಗಳಲ್ಲಿ ಬೆಳೆದ ದ್ವಿದಳ ಧಾನ್ಯದ ಬೆಳೆಯಲ್ಲಿ ಅಧಿಕ ನೀರು ನಿಂತು, ಕೊಳೆತು ರೈತರಿಗೆ ನಷ್ಟವಾಗಿದೆ. ಅಕ್ಕೂರು ಸುತ್ತಲಿನ ಜಮೀನಿನಲ್ಲಿ ರೈತರ ಕೈಗೆ ಬಂದಿದ್ದ ಎಳ್ಳು, ಹೆಸರು ಮತ್ತು ಉದ್ದಿನ ಬೆಳೆ ಅಧಿಕ ಮಳೆಯಿಂದ ನಾಶವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net