

ಬಳ್ಳಾರಿ: ಲಾಕ್ಡೌನ್ದಿಂದಾಗಿ ಕೆಲಸ ಇಲ್ಲದೆ ಕಂಗಾಲಾದ 15 ಜನರ ರಾಜಸ್ಥಾನಿ ಕುಟುಂಬವೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಪಾದಯಾತ್ರೆ ಮೂಲಕ ರಾಜಸ್ಥಾನದ ಚಿತ್ತೋರ ಜಿಲ್ಲೆಗೆ ಹೊರಟಿದೆ.
ಪುಟ್ಟ ಮಕ್ಕಳೊಂದಿಗೆ 50 ಕಿಮೀ ಹೆಚ್ಚು ನಡೆದುಕೊಂಡು ಬಂದಿರುವ ಕುಟುಂಬದವರು, ಮಂಗಳವಾರ ತಾಲೂಕಿನ ಹಲಕುಂದಿ ಚೆಕ್ಪೋಸ್ಟ್ ನಲ್ಲಿ ಕಂಡುಬಂದರು. ಕಳೆದ ಅನೇಕ ವರ್ಷಗಳಿಂದ ಚಳ್ಳಕೆರೆಯಲ್ಲಿ ಪಾನಿಪೂರಿ, ಐಸ್ಕ್ರೀಂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಲಾಕ್ಡೌನ್ ಶುರುವಾದ ಬಳಿಕ ವ್ಯಾಪಾರವಿಲ್ಲದೆ, ಹಣವೂ ಇಲ್ಲದೆ ಪರದಾಡುತ್ತಿದ್ದಾರೆ.
ಭಾನುವಾರ ಚಳ್ಳಕೆರೆಯಿಂದ ಹೊರಟಿದ್ದು ದಾರಿ ಮಧ್ಯೆ ಆಟೋ, ಲಾರಿಯಲ್ಲಿ ಬಂದಿದ್ದೇವೆ. ಸುಮಾರು 50 ಕಿ.ಮೀ ನಡೆದಿದ್ದೇವೆ. ಮಾರ್ಗದಲ್ಲಿ ಜನರು ಊಟ, ಉಪಹಾರ ನೀಡಿದರು. ನಾವು ಊರಿಗೆ ಹೋಗಬೇಕು. ಹೇಗಾದರೂ ಮಾಡಿ ಕಳಿಸಿಕೊಡಿ ಸುದ್ದಿಗಾರರಿಗೆ ಅಂಗಲಾಚಿದರು.