ಆಡೇ ನಮ್ ಗಾಡು: ಪಿ.ಎಚ್. ವಿಶ್ವನಾಥ್ ನಿರ್ದೇಶನದ ಹೊಸ ಸಿನಿಮಾ

aade nam god
Published on

ಬೆಂಗಳೂರು: ಹಿರಿಯ ನಿರ್ದೇಶಕ ಪಿ.ಎಚ್. ವಿಶ್ವನಾಥ್ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಪಂಚಮ ವೇದ’, ‘ಶ್ರೀಗಂಧ’, ‘ಅರಗಿಣಿ’, ‘ರಂಗೋಲಿ’, ‘ಅರುಣೋದಯ’, ‘ಅಂಡಮಾನ್’, ‘ಮುಂಜಾನೆ ಮಂಜು’, ‘ಮುಸುಕು’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಖ್ಯಾತಿ ಕೆ.ಎಚ್. ವಿಶ್ವನಾಥ್ ಅವರಿಗೆ ಸಲ್ಲುತ್ತದೆ. ಈ ಹೊಸ ಚಿತ್ರಕ್ಕೆ ‘ಆಡೇ ನಮ್ ಗಾಡು’ ಎಂದು ಶೀರ್ಷಿಕೆ ಇಡಲಾಗಿದ್ದು, ‘ರಾಮಾ ರಾಮಾ ರೇ’, ‘ಮ್ಯಾನ್ ಆಫ್​ ದಿ ಮ್ಯಾಚ್’ ಖ್ಯಾತಿಯ ನಟರಾಜ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೂಢನಂಬಿಕೆ ಸುತ್ತ ಸಾಗುವ ಈ ಕಥೆಯಲ್ಲಿ ನಟರಾಜ್ ಜತೆ ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಅನೂಪ್ ಶೂನ್ಯ, ಸಾರಿಕಾ ರಾವ್ ಪ್ರಮುಖ ತಾರಾಗಣದಲ್ಲಿ ನಟಿಸಲಿದ್ದಾರೆ.

ಚಿತ್ರಕ್ಕೆ ಪಿ.ಕೆ.ಎಚ್ ದಾಸ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ, ಸ್ವಾಮಿನಾಥನ್ ಸಂಗೀತ, ಹೊಸ್ಮನೆ ಮೂರ್ತಿ ಕಲಾನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ ಇರಲಿದೆ. ಪ್ರೊ. ಬಿ. ಬಸವರಾಜ್ ಮತ್ತು ರೇಣುಕಾ ಬಸವರಾಜ್ ಮೊದಲ ಬಾರಿಗೆ ಸಿನಿಮಾ ನಿರ್ಮಿಸಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ದಿನಾಂಕ ಘೋಷಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net