ರಾಜ್ಯಾದ್ಯಂತ ಪುನೀತ್​ಗೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಬಾಷ್ಪಾಂಜಲಿ’; ಗೀತನಮನ, ಅಪ್ಪು ಗುಣಗಾನ..

ಉಡುಪಿ ಕಲ್ಪನಾ
ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಪುನೀತ್​ ರಾಜಕುಮಾರ್​ಗೆ ಶ್ರದ್ಧಾಂಜಲಿ
Published on

ಬೆಂಗಳೂರು: ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜ್ಯಾದ್ಯಂತ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು, ಪ್ರಮುಖವಾಗಿ ರಾಜ್ಯದ ವಿವಿಧೆಡೆ ಇರುವ ಪ್ರಮುಖ ಚಿತ್ರಮಂದಿರಗಳಲ್ಲಿ ಪುನೀತ್​ ಅವರ ಫೋಟೋ ಇರಿಸಿ ಪೂಜಿಸಿ, ಹಣತೆ ಹಚ್ಚಿ, ಹೂ ಹಾಕಿ ಗೀತನಮನವನ್ನೂ ನಡೆಸವು ಮೂಲಕ ಬಾಷ್ಪಾಂಜಲಿ ಸಲ್ಲಿಸಲಾಗುತ್ತಿದೆ.

ಕನ್ನಡ ಚಿತ್ರಪ್ರದರ್ಶಕರ ನೇತೃತ್ವದಲ್ಲಿ ನಡೆಯತ್ತಿರುವ ಈ ಕಾರ್ಯಕ್ರಮಕ್ಕೆ ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಬಾಷ್ಪಾಂಜಲಿ’ ಎಂಬ ಹೆಸರಿಡಲಾಗಿದ್ದು, ಇದರಲ್ಲಿ ರಾಜ್ಯಾದ್ಯಂತದ ಚಿತ್ರಪ್ರದರ್ಶಕರ ಜೊತೆಗೆ ಅಲ್ಲಿನ ಸಿಬ್ಬಂದಿ ವರ್ಗ ಮಾತ್ರವಲ್ಲದೆ ಚಲನಚಿತ್ರ ಪ್ರೇಕ್ಷಕರು, ಅಭಿಮಾನಿಗಳು ಕೂಡ ಕೈಜೋಡಿಸಿದ್ದಾರೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳ ಆವರಣದಲ್ಲಿ ಇಂದು ಸಂಜೆ ಆರರಿಂದ ಈ ಕಾರ್ಯಕ್ರಮ ಆರಂಭವಾಗಿದ್ದು, ಕೆಲವೆಡೆ ಇನ್ನೂ ನಡೆಯುತ್ತಲೇ ಇದೆ.

ಗೀತಾಂಜಲಿ: ಪುನೀತ್​ಗೆ ಶ್ರದ್ಧಾಂಜಲಿ ಸಲ್ಲಿಸಲೆಂದೇ ಖ್ಯಾತ ಚಿತ್ರಸಾಹಿತಿ ಡಾ.ವಿ. ನಾಗೇಂದ್ರ ಪ್ರಸಾದ್‌ 'ಬೆಳ್ಳಿ ಬಾನಿನಲ್ಲಿ ಸೇರಿ ಹೋದೆ ಅಪ್ಪು..' ವಿಶೇಷವಾದ ಗೀತೆಯೊಂದನ್ನು ರಚಿಸಿದ್ದಾರೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳ ಆವರಣದಲ್ಲಿ ಸಾಮೂಹಿಕವಾಗಿ ಈ ಗೀತೆಯನ್ನು ಹಾಡಿ, ಬಳಿಕ 2 ನಿಮಿಷಗಳ ಮೌನಪ್ರಾರ್ಥನೆಯನ್ನು ಸಲ್ಲಿಸಿ ಪುನೀತ್ ಆತ್ಮಕ್ಕೆ ಶಾಂತಿ ಕೋರಲಾಗಿದೆ.
ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರ ಬಳಿ ನಡೆದ ಕಾರ್ಯಕ್ರಮದಲ್ಲಿ ಭಜರಂಗಿ-2 ಚಿತ್ರದ ವಿಲನ್​ ವಜ್ರಗಿರಿ ಭಾಗವಹಿಸಿದ್ದಾರೆ. ಅಪ್ಪು ಫೋಟೋ ಮುಂದೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹಾವೇರಿಯ ಚಿತ್ರಮಂದಿರದಲ್ಲಿ ಪುನೀತ್​ಗೆ ಶ್ರದ್ಧಾಂಜಲಿ
ಹಾವೇರಿಯ ಚಿತ್ರಮಂದಿರದಲ್ಲಿ ಪುನೀತ್​ಗೆ ಶ್ರದ್ಧಾಂಜಲಿ

ವಿಜಯನಗರದ ಹೊಸಪೇಟೆಯ ಲಕ್ಷ್ಮೀ, ವಿಜಯಪುರದ ಅಮೀರ, ಕೋಲಾರದ ಭವಾನಿ, ರಾಯಚೂರಿನ ಪದ್ಮನಾಭ, ಕಲಬುರಗಿಯ ಸಂಗಮ್​, ಬೀದರ್​ನ ಸಪ್ನಾ ಮಲ್ಟಿಪ್ಲೆಕ್ಸ್, ಹಾವೇರಿಯ ಮಾಗಾವಿ, ಬಳ್ಳಾರಿಯ ನಟರಾಜ್, ಹಾಸನದ ಸಹ್ಯಾದ್ರಿ ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ಅಪ್ಪುಗೆ ಬಾಷ್ಪಾಂಜಲಿ ಸಲ್ಲಿಸಲಾಗಿದೆ.

ಕೊಪ್ಪಳದ ಲಕ್ಷ್ಮೀ, ಶಿವ ಚಿತ್ರಮಂದಿರಗಳಲ್ಲಿ ಬಾಷ್ಪಾಂಜಲಿ.
ಕೊಪ್ಪಳದ ಲಕ್ಷ್ಮೀ, ಶಿವ ಚಿತ್ರಮಂದಿರಗಳಲ್ಲಿ ಬಾಷ್ಪಾಂಜಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net