ರಾತ್ರೋರಾತ್ರಿ ಸರ್ಕಾರಿ ಭೂಮಿ ಪರಭಾರೆ?

16-klr-45 CMC
Published on

ಕಿರುವಾರ ಎಸ್.ಸುದರ್ಶನ್ ಕೋಲಾರ
ಇಲ್ಲಿನ ನಗರಸಭೆಯಿಂದ ಕೆಲ ಆಸ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪರಿಣಾಮ ಕೆಲವರು ರಾತ್ರೋರಾತ್ರಿ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ.

ಸರ್ಕಾರಿ ಜಾಗ, ಪಾರ್ಕ್, ಬಡಾವಣೆಗಳಲ್ಲಿನ ಸಿಎ ಸೈಟ್, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ನಿವೇಶನಗಳಿಗೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಾನೂನು ಬಾಹಿರವಾಗಿ ಖಾತೆ ನೀಡಿರುವುದೇ ಈ ಅಕ್ರಮಕ್ಕೆ ಕಾರಣವಾಗಿದೆ.
ಭೂ ಪರಿವರ್ತನೆಯಾಗದ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಳ್ಳದ ನಿವೇಶನಗಳಿಗೆ, ರಾಜಕಾಲುವೆ, ಸರ್ಕಾರಿ ಜಾಗ ಹಾಗೂ ಬಡಾವಣೆಗಳಲ್ಲಿ ಮೀಸಲಿಟ್ಟಿರುವ ಉದ್ಯಾನವನ ಮತ್ತು ಸಿಎ ನಿವೇಶನಗಳಿಗೂ ಅಧಿಕಾರಿಗಳು ಖಾತೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಗರದಲ್ಲಿನ ವಿವಿಧ ಬಡಾವಣೆಗಳಲ್ಲಿ ನಗರಸಭೆಯ ಆಸ್ತಿಗಳಿಗೆ ಇದು ನಗರಸಭೆ ಸೇರಿರುವ ಸ್ವತ್ತು, ಅತಿಕ್ರಮ ಪ್ರವೇಶ ನಿಷೇಽಸಲಾಗಿದೆ ಎಂದು ಫಲಕಗಳನ್ನು ಅಳವಡಿಸಲಾಗಿದೆ. ಆದರೆ ಕೆಲ ಆಸ್ತಿಗಳಿಗೆ ಖಾತೆ ಪಡೆದುಕೊಂಡಿರುವವರು ರಾತ್ರೋರಾತ್ರಿ ಫಲಕಗಳನ್ನು ಕಿತ್ತು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ.

  • 15 ದಿನದಲ್ಲಿ ವರದಿ ಸಲ್ಲಿಸಿ
    ನಗರಸಭೆಯಲ್ಲಿ ಆಸ್ತಿ ತಂತ್ರಾAಶದಲ್ಲಿ 2022ರ ಜ.1 ರಿಂದ 2022ರ ಜು.1ರವರೆಗೆ ಅಕ್ರಮ ಖಾತೆಗಳನ್ನು ವಿತರಣೆ ಮಾಡಿದ್ದು, ನಿವೇಶನಗಳಿಗೆ ಕಾನೂನು ಬಾಹಿರವಾಗಿ ಇ-ತಂತ್ರಾಂಶದಲ್ಲಿ ದಾಖಲಿಸಿರುವ ಸ್ವತ್ತುಗಳು ಅಕ್ರಮವಾಗಿವೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು, ಅಕ್ರಮ ಖಾತೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ, ಸದಸ್ಯ ಎಸ್.ಆರ್.ಮುರಳಿಗೌಡ ಹಾಗೂ ಇತರ ಸದಸ್ಯರು ೨೦೨೨ರ ಜುಲೈನಲ್ಲೇ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ನೀಡಿದ್ದರು. ಆದರೆ ದೂರು ನೀಡಿ ವರ್ಷಗಳುರುಳಿದರೂ ಯಾವುದೇ ರೀತಿ ಕ್ರಮ ಕೈಗೊಂಡಿರಲಿಲ್ಲ. ಅಕ್ರಮ ಹೆಚ್ಚಾದ ಹಿನ್ನೆಲೆಯಲ್ಲಿ ಸದಸ್ಯರ ಮನವಿಗೆ ಮಣಿದು ಜಿಲ್ಲಾಡಳಿತಕ್ಕೆ ಪತ್ರ ಬರೆದಿರುವ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, 15 ದಿನದಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಯು ಆಗಿರುವುದರಿಂದ ಕೂಡಲೇ ಪರಿಶೀಲನೆ ನಡೆಸಿ ಕ್ರಮವಹಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
  • ಹಣಕೊಟ್ಟರಷ್ಟೇ ಕೆಲಸ
    ಆಸ್ತಿ ವರ್ಗಾವಣೆ, ತಿದ್ದುಪಡಿ, ಇ-ಆಸ್ತಿ ಸಂಬಂಧ ಸಕಾಲ, ಟಪಾಲು ಮೂಲಕ ಸಲ್ಲಿಕೆಯಾದ ಅರ್ಜಿ ಇತ್ಯರ್ಥಪಡಿಸಿ ನಿಗದಿತ ಅವಧಿಯೊಳಗೆ ಅರ್ಜಿದಾರನಿಗೆ ದಾಖಲೆ ಸಲ್ಲಿಸಬೇಕು. ಆದರೆ, ಇಲ್ಲಿನ ನಗರಸಭೆಯ ಕಂದಾಯ ವಿಭಾಗದ ಅಽಕಾರಿಗಳು, ಸಿಬ್ಬಂದಿಯ ನಿಯಮವೇ ಬೇರೆ ಇದ್ದು, ಅರ್ಜಿ ವಿಲೇವಾರಿಗೆ ಅವರು ಫಿಕ್ಸ್ ಮಾಡಿದ ರೇಟ್ ಕಾರ್ಡ್ನಂತೆಯೇ ಮುಂದುವರಿಯಬೇಕಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
    ಕಂದಾಯ ವಿಭಾಗಕ್ಕೆ ಅರ್ಜಿ ಸಲ್ಲಿಸುವ ರಾಜಕೀಯ ಅಥವಾ ಸ್ಥಿತಿವಂತರ ಕೆಲಸಗಳು ತ್ವರಿತಗತಿಯಲ್ಲಾಗುತ್ತವೆ. ಆದರೆ, ಸಾಮಾನ್ಯ ಜನರನ್ನು ವಿನಾಕಾರಣ ಅಲೆದಾಡಿಸಿ ವಿಳಂಬ ಮಾಡುತ್ತಾರೆ ಎಂಬ ಆರೋಪವೂ ಇದೆ.
  • ನೂರಾರು ಕಡತ ನಾಪತ್ತೆ
    2022ರ ಜ.1ರಿಂದ ಜುಲೈವರೆಗೆ ಒಟ್ಟು 1761 ಆಸ್ತಿಗಳನ್ನು ಇ-ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ನಮೂನೆ-೩ನ್ನು ನೀಡಲಾಗಿದೆ. ಆದರೆ, 1761 ಕಡತಗಳ ಪೈಕಿ 949 ಕಡತಗಳು ನಗರಸಭೆಯಲ್ಲಿ ಲಭ್ಯವಾಗಿದ್ದು, ಅದರಲ್ಲಿ ೪೮ ಆಸ್ತಿಗಳಿಗೆ ಅಕ್ರಮ ಖಾತೆ ಮಾಡಿಕೊಟ್ಟಿರುವುದು ಸಾಬೀತಾಗಿದೆ. ಉಳಿದ ೮೧೨ ಆಸ್ತಿಗಳ ಸಂಬAಧ ನಗರಸಭೆಯಲ್ಲಿ ಕಡತಗಳು ಲಭ್ಯವಾಗಿಲ್ಲ ಎನ್ನಲಾಗಿದೆ.

ಕೋಟ್…
ಅಕ್ರಮವಾಗಿ ಖಾತೆ ನೀಡಿರುವ ಬಗ್ಗೆ ದೂರುಗಳು ಬಂದಿದ್ದು, ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು. ಕಂದಾಯ ವಿಭಾಗದಿಂದ ಖಾತೆಗಳ ವಿತರಣೆಯು ಸಕಾಲದಲ್ಲಿ ನಡೆಯುತ್ತಿದೆ.
| ಅಕ್ರಂಪಾಷಾ, ಜಿಲ್ಲಾಧಿಕಾರಿ, ಕೋಲಾರ

ಕೋಟ್…
ದೂರು ನೀಡಿ ಎರಡು ವರ್ಷಗಳು ಕಳೆದದೂ ಯಾವುದೇ ರೀತಿಯ ಕ್ರಮವಾಗಿಲ್ಲ, ನಗರಸಭೆ ಎಂದರೆ ಜನರ ವಿಶ್ವಾಸ ಕಳೆದುಕೊಂಡAತಾಗಿದೆ. ನಗರಸಭೆಯಲ್ಲಿ ಏನು ನಡೀತಿದೆ ಎಂಬುದರ ಬಗ್ಗೆ ಅಽಕಾರಿಗಳು ಸದಸ್ಯರಿಗೂ ಮಾಹಿತಿ ನೀಡುತ್ತಿಲ್ಲ. ನೂರಾರು ಕಡತಗಳು ನಾಪತ್ತೆ ಆಗಿವೆ ಎಂದರೆ ಏನರ್ಥ?
| ಎಸ್.ಆರ್.ಮುರಳಿಗೌಡ, ನಗರಸಭೆ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net