ಕಾಮನ್ವೆಲ್ತ್​ ಗೇಮ್ಸ್​: ಭಾರತದ ಸಿದ್ಧತೆಗೆ 53.09 ಕೋಟಿ ರೂ. ವೆಚ್ಚ

ಕಾಮನ್ವೆಲ್ತ್​ ಗೇಮ್ಸ್​: ಭಾರತದ ಸಿದ್ಧತೆಗೆ 53.09 ಕೋಟಿ ರೂ. ವೆಚ್ಚ
ಕಾಮನ್ವೆಲ್ತ್​ ಗೇಮ್ಸ್​: ಭಾರತದ ಸಿದ್ಧತೆಗೆ 53.09 ಕೋಟಿ ರೂ. ವೆಚ್ಚ
Published on
ನವದೆಹಲಿ: ಗುರುವಾರದಿಂದ ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್​ ಗೇಮ್ಸ್​ (Glasgow Commonwealth Games) ಸಿದ್ಧತೆಗೆ 53.09 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕ್ರೀಡಾ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. ಈ ಪೈಕಿ ಅಥ್ಲೆಟಿಕ್ಸ್​ ಮತ್ತು ಬಾಕ್ಸಿಂಗ್​ ಕ್ರೀಡೆಗೆ ಹೆಚ್ಚಿನ ಹಣ ವ್ಯಯಿಸಲಾಗಿದೆ.

32 ಸದಸ್ಯರ ಅಥ್ಲೆಟಿಕ್ಸ್​ ತಂಡದ ತರಬೇತಿಗೆ 20 ಕೋಟಿ ರೂ. ನೀಡಲಾಗಿದೆ. 14 ಬಾಕ್ಸರ್​ಗಳ ತರಬೇತಿಗೆ 10 ಕೋಟಿ ರೂ. ಖರ್ಚು ಮಾಡಲಾಗಿದೆ. ಮೀರಾಬಾಯಿ ಚಾನು ಸಹಿತ 12 ವೇಟ್​ಲಿಫ್ಟರ್​ಗಳ ತರಬೇತಿಗೆ 7.5 ಕೋಟಿ ರೂ. ವ್ಯಯಿಸಲಾಗಿದೆ.

ಈ ಬಾರಿ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಬ್ಯಾಡ್ಮಿಂಟನ್​, ಶೂಟಿಂಗ್​, ಕುಸ್ತಿ, ಹಾಕಿ, ಕ್ರಿಕೆಟ್​ನಂಥ ಪ್ರಮುಖ ಸ್ಪರ್ಧೆಗಳು ಇರುವುದಿಲ್ಲ. ಹೀಗಾಗಿ ಭಾರತಕ್ಕೆ ಹೆಚ್ಚಿನ ಪದಕಗಳ ನಿರೀಕ್ಷೆ ಇಲ್ಲ. ಆದರೆ ಮುಂದಿನ 2030ರ ಕಾಮನ್ವೆಲ್ತ್​ ಗೇಮ್ಸ್​ ಅಹಮದಾಬಾದ್​ನಲ್ಲಿ ನಡೆಯಲಿರುವುದರಿಂದ ಭಾರತ ಈ ಬಾರಿ ಹೆಚ್ಚು ಆಸಕ್ತಿಯಿಂದ ಸ್ಪರ್ಧಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net