700 ಕ್ಕೂ ಅಧಿಕ ಡಾ.ರಾಜ್ ಅಭಿಮಾನಿಗಳಿಂದ ಎನ್.ಆರ್.ರಮೇಶ್ ಭೇಟಿ, ಶುಭ ಆರೈಕೆ.
ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ ರಾಜ್ಯಾಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸೋಮಣ್ಣ, ಕಾರ್ಯಧ್ಯಕ್ಷ ಹೊನ್ನೇಗೌಡ, ಸಂಘಟನಾ ಕಾರ್ಯದರ್ಶಿ ಕೆ.ಎಂ.ರಮೇಶ್ ,ಪತ್ರಕರ್ತ ಸದಾಶಿವ ಶೆಣ್‌ಐ, ಕನ್ನಡ ಪರ ಹೋರಾಟಗಾರ ಜಗದೀಶ್ ರೆಡ್ಡಿ, ಜಾಗೃತಿ ಟ್ರಸ್ಟ್ ಅಧ್ಯಕ್ಷ ನಾಗೇಶ್ ಮತ್ತಿತರರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅಖಿಲ ಕರ್ನಾಟಕ ಡಾ॥ ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್.ಆರ್.ರಮೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ರಾಜ್ಯದ 25 ಜಿಲ್ಲೆಗಳಿಂದ ಆಗಮಿಸಿದ್ದ 700 ಕ್ಕೂ ಹೆಚ್ಚು ಡಾ॥ ರಾಜ್ ಕುಮಾರ್ ಅಭಿಮಾನಿಗಳು ಭಾಗವಹಿಸಿ ಶುಭ ಕೋರಿದರು.
ಕಳೆದ ಒಂದು ವಾರದಿಂದ ಎನ್.ಆರ್.ರಮೇಶ್ ಅಭಿಮಾನಿಗಳು ನಗರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಿದ್ದ ಹುಟ್ಟು ಹಬ್ಬ ಆಚರಣೆಯಲ್ಲಿ ಭಾಗವಹಿಸುತ್ತಿರುವ ಎನ್.ಆರ್.ರಮೇಶ್ ಅವರು ಇಂದು ಬೆಳಗ್ಗೆ ನಗರದ ಧರ್ಮರಾಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಧರ್ಮರಾಯ ದೇವಸ್ಥಾನದ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಮಾನಿಗಳಿಗೆ ಸಿಹಿ ಹಂಚಿದರು.
ಗಾಂಧಿ ಬಜಾರ್ ವರ್ತಕರ ಸಂಘದಿಂದ ಹುಟ್ಟು ಹಬ್ಬದ ಆಚರಣೆ
ಸೋಮವಾರ ಮಧ್ಯಾಹ್ನ ಗಾಂಧಿ ಬಜಾರ್ ವರ್ತಕರ ಸಂಘ ಮತ್ತು ಸುಂಕೇನಹಳ್ಳಿ ಬಿಜೆಪಿ ಕಾರ್ಯಕರ್ತರು ಗಾಂಧಿ ಬಜಾರ್ ಮುಖ್ಯ ರಸ್ಥೆಯ ಡಾ.ರಾಜ್ ಕುಮಾರ್ ಪುತ್ಥಳಿ ವೃತ್ತದಲ್ಲಿ ಆಯೋಜಿಸಿದ್ದ ಆಚರಣಾ ಸಮಾರಂಭದಲ್ಲಿ ರಾಜ್ ಕುಮಾರ್ ಮತ್ತು ಪುನಿತ್ ರಾಜ್‌ಕುಮಾರ್ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ಜನ್ಮದಿನ ಆಚರಿಸಿದರು. 3 ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಎನ್.ಆರ್. ರಮೇಶ್ ಕೇಕ್ ಕತ್ತರಿಸಿ ಸ್ಥಳಿಯ ವರ್ತಕರು ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿದರು. ಈ ವೇಳೆ ವರ್ತಕರ ಸಂಘದ ಸದಸ್ಯರು ಗಾಂಧಿ ಬಜಾರ್‌ನಲ್ಲಿ ಸ್ಥಾಪಿಸಿರುವ ಡಾ.ರಾಜ್ ಕುಮಾರ್ ಮತ್ತು ಪುನಿತ್ ರಾಜ್ ಕುಮಾರ್ ಅವರ ಪುತ್ಥಳಿಗಳನ್ನು ಎನ್.ರಮೇಶ ಅವರು ಕೊಡುಗೆಯಾಗಿ ನೀಡಿದ್ದನ್ನು ಸ್ಮರಿಸಿದರು.
ಎನ್.ಆರ್.ಆರ್.ಯುವ ಬ್ರಿಗೇಡ್ ತ್ಯಾಗರಾಜನಗರ ಭೈರಪ್ಪ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಎನ್.ಆರ್.ರಮೇಶ್ ಅವರು ಭಾಗವಹಿಸಿದ್ದರು. ಈ ವೇಳೆ ಬ್ರಿಗೇಡ್‌ನ ಸದಸ್ಯರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗಿತಿಸಿದರು. ಇದೇ ವೇಳೆ ಸ್ಥಳಿಯ ಬಡವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಭಟ್ಕಳದಲ್ಲಿ ಹುಟ್ಟು ಹಬ್ಬ ಆಚರಣೆ
ಎನ್.ಆರ್.ಯುವ ಬ್ರಿಗೇಡ್ (ಭಟ್ಕಳ) ಸದಸ್ಯರು ಮತ್ತು ಅಭಿಮಾನಿಗಳು ಎನ್.ಆರ್.ರಮೇಶ್ ಹುಟ್ಟು ಹಬ್ಬದ ಪ್ರಯುಕ್ತ ಬೃಹತಾಕಾರದ ಕೇಕ್ ಕತ್ತರಿಸಿ ಹುಟ್ಟ ಹಬ್ಬ ಆಚರಿಸಿದರು.
12000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ
ಎನ್.ಆರ್.ರಮೇಶ್ ಅವರು ಹುಟ್ಟು ಹಬ್ಬದ ಪುಯುಕ್ತ ಸುಧಾಮನಗರ ವಾರ್ಡ್ ಬಿಜೆಪಿ ಅಧ್ಯಕ್ಷ ರಮೇಶ್ ಅವರು ಜ.21 ರಂದು ತುಮಕೂರು ಸಿದ್ಧಗಂಗಾ ಮಠದಲ್ಲಿ 12000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ ಹಾಗೂ ಎನ್.ಆರ್.ಆರ್. ಅಭಿಮಾನಿಗಳು ಮತ್ತು ಹಿತೈಷಿಗಳು ಜ.20 ರಂದು ಪುಟ್ಟೆನಹಳ್ಳಿಯ ಅನಾಥಾಶ್ರಮದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.