

ಬಮಾಕೊ(ಮಾಲಿ): ಮಧ್ಯ ಮಾಲಿಯಲ್ಲಿ ನಡೆಸಲಾದ ಏರ್ಸ್ಟ್ರೈಕ್ನಲ್ಲಿ ಅಲ್ಖೈದಾ ಉಗ್ರ ಸಂಘಟನೆಯ 50ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರು ಳಿಸಿದ್ದೇವೆ ಎಂದು ಫ್ರಾನ್ಸ್ ಸರ್ಕಾರ ಹೇಳಿದೆ.
ರ್ಬುನಾ ಫಾಸೊ ಮತ್ತು ನೈಜರ್ನ ಗಡಿಯ ಸಮೀಪವಿರುವ ಪ್ರದೇಶದಲ್ಲಿ ಶುಕ್ರವಾರ ಈ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಫ್ರಾನ್ಸ್ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಹೇಳಿದ್ದಾರೆ. ಮಿರಾಜ್ ಜೆಟ್ಗಳ ಮೂಲಕ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಈ ವೇಳೆ ನಾಲ್ವರು ಭಯೋತ್ಪಾದಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ.