

ಚಂಡೀಗಢ: ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ಜಾರಿಗೆ ಬಂದ ನಂತರ ಭಾರತಕ್ಕೆ ಬಂದಿದ್ದ ಒಂದು ಸಾವಿರಕ್ಕೂ ಹೆಚ್ಚು ಪಾಕಿಸ್ತಾನಿ ಹಿಂದುಗಳು ಸ್ವದೇಶಕ್ಕೆ ಮರಳಿಲ್ಲ. ವೀಸಾ ಅವಧಿ ಮುಗಿದ ಮೇಲೂ ಅವರು ಭಾರತದಲ್ಲೇ ಇರುವುದು ಬೆಳಕಿಗೆ ಬಂದಿದೆ.
ಪಂಜಾಬ್ನ ವಾಘಾ ಅಟ್ಟಾರಿ ಗಡಿಯಿಂದ ಇತ್ತೀಚೆಗೆ ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಹಿಂದುಗಳು ಹೊಸ ಕಾನೂನಿನ ಅನುಕೂಲ ಪಡೆಯುವುದರ ಮೇಲೆ ಕಣ್ಣು ನೆಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ವರ್ಷ ಜನವರಿಲ್ಲಿ ಸುಮಾರು 1200 ಪಾಕಿಸ್ತಾನಿ ಹಿಂದುಗಳು ಭಾರತಕ್ಕೆ ಭೇಟಿ ನೀಡಿದ್ದು ಅವರಲ್ಲಿ 900 ಜನರು ಪಾಕ್ಗೆ ಹಿಂದಿರುಗಿಲ್ಲ. ಕಳೆದ ವರ್ಷ ಡಿಸೆಂಬರ್ನಲ್ಲಿ 850 ಜನರು ಭಾರತ ಪ್ರವೇಶಿಸಿದ್ದು ಆ ಪೈಕಿ 220 ಮಂದಿ ಪಾಕಿಸ್ತಾನಕ್ಕೆ ಮರಳಿಲ್ಲ.