ಫ್ಲೆಕ್ಸ್ ತೆರವು ತೆರವು ಮಾಡಿದ್ದಕ್ಕೆ ಆಕ್ರೋಶ

rayanna
ಸಂಗೊಳ್ಳಿ ರಾಯಣ್ಣ ಜನ್ಮದಿನದ ಫ್ಲೆಕ್ಸ್ ತೆರವುಗೊಳಿಸಿದ್ದನ್ನು ಖಂಡಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರಮುಖರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್, ರವಿ ಸಾಧು ಶೆಟ್ಟಿ, ನಿತಿನ್ ರೆಡ್ಡಿ, ಚೇತನ್, ಪ್ರವೀಣ್, ರಾಘವೇಂದ್ರ, ಲೋಕೇಶ್ ಇತರರಿದ್ದರು.
Published on

ಶಿವಮೊಗ್ಗ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನಕ್ಕೆ ಶುಭಕೋರುವ ಸಲುವಾಗಿ ನಗರದ ವಿವಿಧೆಡೆ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ನಗರ ಪಾಲಿಕೆಯಿಂದ ಏಕಾಏಕಿ ತೆರವು ಮಾಡಲಾಗಿದೆ ಎಂದು ಆರೋಪಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರಮುಖರು ಮಂಗಳವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.

ಆ.15ರಂದು ಸ್ವಾತಂತ್ರೃ ದಿನಾಚರಣೆ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಜನ್ಮದಿನಾಚರಣೆ ಆಚರಿಸುವ ಸಂಬಂಧ ಶುಭಕೋರಿ ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ ಮತ್ತು ವಿನೋಬನಗರದಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ಪಾಲಿಕೆಯಿಂದ ಇದನ್ನು ಏಕಾಏಕಿ ತೆರವುಗೊಳಿಸಿರುವುದು ಸಂಗೊಳ್ಳಿ ರಾಯಣ್ಣನಿಗೆ ಮಾಡಿರುವ ಅಪಮಾನ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಫ್ಲೆಕ್ಸ್ ತೆರವುಗೊಳಿಸಿರುವ ಅಧಿಕಾರಿಗಳು ಪುನಃ ಫ್ಲೆಕ್ಸ್ ಹಾಕಿಸಿಕೊಡಬೇಕು. ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವೇದಿಕೆ ಅಧ್ಯಕ್ಷ ವಾಟಾಳ್ ನಾಗರಾಜ್, ಪ್ರಮುಖರಾದ ನಿತಿನ್ ರೆಡ್ಡಿ, ರವಿ ಸಾಧು ಶೆಟ್ಟಿ, ಸತೀಶ್ ಗೌಡ, ಲೋಕೇಶ್, ಅಕ್ಬರ್ ಪಾಷಾ, ಚೇತನ್, ಮಾರುತಿ, ರಾಘವೇಂದ್ರ, ಪ್ರವೀಣ್, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net