

ಮಹಾರಾಷ್ಟ್ರ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಭಾರತೀಯ ಸೇನೆ ಅಸ್ತಿತ್ವಕ್ಕೆ ಬಂದಿತ್ತು. ಭಾರತೀಯ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶವನ್ನ ಕಾಯುತ್ತಾರೆ. ಭಯೋತ್ಪಾದಕರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಾರೆ. ಆದರೆ ಇದೀಗ ಸಾಕಿಂಗ್ ಘಟನೆಯೊಂದು ಮಹಾರಾಷ್ಟ್ರದ ಕಂದಹಾರ್ನಲ್ಲಿ ನಡೆದಿದೆ.
ಮಹಾರಾಷ್ಟ್ರದ ಕಂದಹಾರ್ನಲ್ಲಿ ಸೈನಿಕನೊಬ್ಬರು ತನ್ನ ಗರ್ಭಿಣಿ ಪತ್ನಿ ಹಾಗೂ 4 ವರ್ಷದ ಮಗಳನ್ನು ಕೊಲೆ ಮಾಡಿದ್ದಾರೆ. ಸೈನಿಕ 8 ತಿಂಗಳ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ 4 ವರ್ಷದ ಮಗಳನ್ನು ಕೊಲ್ಲುವಂತಹ ಕಾರಣವಾದರೂ ಏನಿತ್ತು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಫ್ಲಾಟ್ ಒಂದರ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ನಡೆದು ಈ ಕೊಲೆಯಾಗಿದೆ ಎನ್ನಲಾಗಿದೆ.
ಮಲಕೋಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಸದ್ಯಕ್ಕೆ ಆ ಸೈನಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯ ಬಳಿಕ ಕೊಲೆಯ ಹಿಂದಿರುವ ನಿಜವಾದ ಕಾರಣ ತಿಳಿಯಬೇಕಿದೆ.
ಆದರೆ ಕೊಲೆ ಮಾಡಿದ ನಂತರ ಆರೋಪಿ ಏಕನಾಥ್ ಜಯಭಯೆ ಮಲಕೋಲಿ ಪೊಲೀಸ್ ಠಾಣೆ ಹಜಾರ್ ಝಾಲಾಕ್ಕೆ ತೆರಳಿ ಸ್ವಯಂಪ್ರೇರಿತವಾಗಿ ಪೊಲೀಸರ ಮುಂದೆ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.