ಶಾರುಖ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಲ್ಮಾನ್

patan
Published on

ಮುಂಬೈ: ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಬಾಲಿವುಡ್‌ನ ಮೆಗಾಸ್ಟಾರ್​​​​ಗಳು. ಇವರ ಚಿತ್ರಗಳು ತೆರೆಗೆ ಬಂದ ಕೂಡಲೇ ಜನಪ್ರಿಯವಾಗುತ್ತವೆ. ಆದರೆ ಇಬ್ಬರೂ ಖಾನ್‌ಗಳು ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡಾಗ ಅಭಿಮಾನಿಗಳಲ್ಲಿ ವಿಭಿನ್ನ ಕ್ರೇಜ್‌ ಕಾಣಿಸಿಕೊಳ್ಳುತ್ತದೆ. ಶಾರುಖ್-ಸಲ್ಮಾನ್ 'ಪಠಾಣ್' ಮತ್ತು 'ಟೈಗರ್ 3' ನಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಹೀಗೆ ಆಯಿತು.  

ಈ ವರ್ಷದ ಜನವರಿಯಲ್ಲಿ ಶಾರುಖ್ 'ಪಠಾಣ್' ಬಿಡುಗಡೆಯಾಯಿತು. ಇದರಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ದೀಪಾವಳಿ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಸ್ಪೈ ಥ್ರಿಲ್ಲರ್ ಚಿತ್ರ 'ಟೈಗರ್ 3' ಬಿಡುಗಡೆಯಾಯಿತು, ಇದರಲ್ಲಿ ಕಿಂಗ್ ಖಾನ್ ಕಾಣಿಸಿಕೊಂಡಿದ್ದರು. ಇದೀಗ ಶಾರುಖ್ ಜೊತೆ ತೆರೆ ಹಂಚಿಕೊಳ್ಳುವ ಬಗ್ಗೆ ಸಲ್ಮಾನ್ ಈಗ ಮುಕ್ತವಾಗಿ ಮಾತನಾಡಿದ್ದಾರೆ. 

ಆಫ್-ಸ್ಕ್ರೀನ್ ಕೆಮಿಸ್ಟ್ರಿ ಉತ್ತಮವಾಗಿದೆ
ANI ಗೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಶಾರುಖ್ ಖಾನ್ ಜೊತೆಗಿನ ಬಾಂಧವ್ಯದ ಬಗ್ಗೆ ಹೇಳಿದ್ದು, ನಮ್ಮ ಆಫ್-ಸ್ಕ್ರೀನ್ ಕೆಮಿಸ್ಟ್ರಿ ನಮ್ಮ ಆನ್-ಸ್ಕ್ರೀನ್ ಕೆಮಿಸ್ಟ್ರಿಗಿಂತ ಉತ್ತಮವಾಗಿದೆ. ಆನ್-ಸ್ಕ್ರೀನ್ ಕೆಮಿಸ್ಟ್ರಿ ತುಂಬಾ ಚೆನ್ನಾಗಿದ್ದಾಗ, ನೀವು ಆಫ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಅರ್ಥಮಾಡಿಕೊಳ್ಳಬಹುದು.

ಪಟಾಕಿ ಸುಡುವ ಬಗ್ಗೆ ಎಚ್ಚರಿಕೆ 
ಥಿಯೇಟರ್‌ಗಳಲ್ಲಿ 'ಟೈಗರ್ 3' ವೀಕ್ಷಿಸಿದ ನಂತರ ಪಟಾಕಿ ಸುಡುವ ಬಗ್ಗೆ ಜನರನ್ನು ಸಲ್ಮಾನ್ ಮತ್ತಷ್ಟು ಎಚ್ಚರಿಸಿದ್ದಾರೆ. 'ಪಟಾಕಿ ಸುಡಬೇಡಿ, ಇದು ತುಂಬಾ ಅಪಾಯಕಾರಿ. ಇದು ಒಳ್ಳೆಯದಲ್ಲ. ಈ ರೀತಿ ಮಾಡುವುದರಿಂದ ನನ್ನ ಗೌರವವನ್ನು ಗಳಿಸುತ್ತೇವೆ ಎಂದು ಅಭಿಮಾನಿಗಳು ಭಾವಿಸಿದರೆ ಅದು ಸುಳ್ಳು. ಪಟಾಕಿ ಸುಡುವುದರಿಂದ ಜನರು ಪ್ರಾಣ ಕಳೆದುಕೊಳ್ಳಬಹುದು. ಯಾವುದೇ ಅಪಘಾತ ಸಂಭವಿಸುವುದನ್ನು ನಾನು ಬಯಸುವುದಿಲ್ಲ. ನನ್ನ ಪೋಸ್ಟರ್ ಗಳಿಗೆ ಹಾಲನ್ನು ಸುರಿಸಬೇಡಿ. ಬದಲಾಗಿ ಬಡ ಮಕ್ಕಳಿಗೆ ಹಾಲು ಕೊಡಿ ಎಂದು ಹೇಳಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net