ದಾಖಲೆ ಸೃಷ್ಠಿಸಿದ ನಮ್ಮ ಮೆಟ್ರೋ; ಒಂದೇ ದಿನದಲ್ಲಿ 9 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರ| Metro

metro
Published on

ಬೆಂಗಳೂರು| ಬಿಎಂಆರ್‌ಸಿಎಲ್ ಗಣನೀಯ ದರ ಪರಿಷ್ಕರಣೆಯನ್ನು ಜಾರಿಗೆ ತಂದ ಕೆಲವೇ ವಾರಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಟಿಕೆಟ್ ಬೆಲೆ ಏರಿಕೆಯ ಬಗ್ಗೆ ಸಾರ್ವಜನಿಕರ ಕಳವಳಗಳದ ಹೊರತಾಗಿಯೂ, ನಗರದ ಕುಖ್ಯಾತ ಸಂಚಾರದ ಸಮಸ್ಯೆಯಿಂದ ಬಳಲುತ್ತಿರುವ ಲಕ್ಷಾಂತರ ಬೆಂಗಳೂರಿಗರಿಗೆ ಮೆಟ್ರೋ ಆದ್ಯತೆಯ ಸಾರಿಗೆ ವಿಧಾನವಾಗಿ ಉಳಿದಿದೆ.

ಏಪ್ರಿಲ್ 17 ರಂದು 9.08 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಇದು ಬೆಂಗಳೂರು ಮೆಟ್ರೋ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ. ಶೇ.80ರಷ್ಟು ದರ ಹೆಚ್ಚಳ ಮಾಡಿದರೂ ಲೆಕ್ಕಿಸದೇ ಏ.17ರಂದು ಒಂದೇ ದಿನ ಬರೋಬ್ಬರಿ 9 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಈ ಮೂಲಕ ಈವರೆಗಿನ ಅತ್ಯಧಿಕ ಪ್ರಯಾಣಿಕರು ಸಂಚಾರ ಮಾಡಿದ ದಾಖಲೆಯನ್ನು ಬರೆದಿದ್ದಾರೆ.

ನಮ್ಮ ಮೆಟ್ರೋ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಲೈನ್ 1 (ಪರ್ಪಲ್ ಲೈನ್) ನಲ್ಲಿ 4,35,516 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಮತ್ತು ಲೈನ್ 2 (ಗ್ರೀನ್ ಲೈನ್) ನಲ್ಲಿ 2,85,240 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ನಗರದ ಅತ್ಯಂತ ಜನನಿಬಿಡ ಸಾರಿಗೆ ಕೇಂದ್ರವಾದ ಕೆಂಪೇಗೌಡ ಇಂಟರ್ಚೇಂಜ್ ನಿಲ್ದಾಣದಲ್ಲಿ 1,87,397 ಪ್ರಯಾಣಿಕರು ಮಾರ್ಗಗಳನ್ನು ಬದಲಾಯಿಸಿದ್ದಾರೆ.

ಅತಿಹೆಚ್ಚು ಪ್ರಯಾಣಿಕರು ಸಂಚರಿಸಿದ 3 ದಾಖಲೆ:

2025 ಏಪ್ರಿಲ್ 17 = 9,08,153

2024 ಆಗಸ್ಟ್ 24 = 9,17,365

2024 ಡಿಸೆಂಬರ್ 06 = 9,20,562

(ಏಜೆನ್ಸೀಸ್)

ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಮೇಲಿಂದ ಮೇಲೆ ಹೆಚ್ಚಿಸಿ ಜನರಿಗೆ ಆರ್ಥಿಕ ಬರೆ ನೀಡುತ್ತಿದೆ ಎಂದು ಜನರು ದೂರಿದ್ದರು. ಇದಕ್ಕೆ ಸಾಲದೆಂಬಂತೆ ನಿರ್ವಹಣಾ ವೆಚ್ಚದ ನೆಪದಲ್ಲಿ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ಕನಿಷ್ಠ 60 ಹಾಗೂ ಗರಿಷ್ಠ 100 ರೂಪಾಯಿ ದರ ವಿಧಿಸಲಾಯಿತು. ಇದರಿಂದಾಗಿ ಅಭಿಯಾನ, ನಮ್ಮ ಮೆಟ್ರೋ ಬಹಿಷ್ಕಾರಗಳು ನಡೆದವು. ನಮ್ಮ ಮೆಟ್ರೋ ನಡೆಯನ್ನು ಖಂಡಿಸಲಾಯಿತು. ಬಳಿಕ ಜನರು ಅನಿವಾರ್ಯವಾಗಿ ಇದೇ ಮೆಟ್ರೋದಲ್ಲಿ ಓಡಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net