

viral news| ಅದೃಷ್ಟ ಅಂದ್ರೆ ಇದೇ ಇರ್ಬೇಕು ನೋಡಿ. ಯುಕೆಯ ಉದ್ಯಾನವೊಂದರಲ್ಲಿ ಪತ್ತೆಯಾದ ಹಳೆಯ ಹೂವಿನ ಕುಂಡವೊಂದು ಹರಾಜಿನಲ್ಲಿ 56 ಲಕ್ಷ ರೂ.ಗೆ ಮಾರಾಟವಾಗಿದೆ.
ಇನ್ನೂ ಲಂಡನ್‌ನಲ್ಲಿ ನಡೆದ ಚಿಸ್ವಿಕ್ ಹರಾಜಿನ ಆರಂಭದಲ್ಲಿ, ಹೂವಿನ ಕುಂಡದ ಬೆಲೆಯನ್ನು 6.7 ಲಕ್ಷದಿಂದ 11 ಲಕ್ಷ ರೂ.ಗೆ ನಿಗದಿಪಡಿಸಲಾಗಿತ್ತು. ಅನೇಕ ಜನರು ಅದನ್ನು ಖರೀದಿಸಲು ಆಸಕ್ತಿ ಹೊಂದಿದ್ದರಿಂದ ಅದರ ಬಿಡ್ಡಿಂಗ್ ಹೆಚ್ಚಾಯಿತು. ಇದೀಗ ಅಮೆರಿಕ ಮೂಲದ ವ್ಯಕ್ತಿಯೊಬ್ಬರು ಅದನ್ನು 56 ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ.
ವರದಿಗಳ ಪ್ರಕಾರ, ಉದ್ಯಾನದಲ್ಲಿ ಕೈಬಿಡಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂದ ಈ ಕೃತಿಯನ್ನು 1964 ರಲ್ಲಿ ಹ್ಯಾನ್ಸ್ ಕೊಪ್ಪರ್ ಎಂಬುವವರು ತಯಾರಿಸಿದ್ದಾರೆ. ಅವರು 1939 ರಲ್ಲಿ ದಕ್ಷಿಣ ಲಂಡನ್‌ನಲ್ಲಿರುವ ಕ್ಯಾಂಬರ್‌ವೆಲ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಬೋಧಿಸುತ್ತಿದ್ದಾಗ ಜರ್ಮನಿಯಿಂದ ಯುಕೆಗೆ ಅವರು ಪಲಾಯನ ಮಾಡಿದರು.
ವರದಿಯ ಪ್ರಕಾರ ಕೊಪ್ಪರ್ 1964 ರಲ್ಲಿ ಅನಾಮಧೇಯ ಮಹಿಳೆಯ ಕೋರಿಕೆಯ ಮೇರೆಗೆ ಈ ಹೂವಿನ ಕುಂಡವನ್ನು ತಯಾರಿಸಿದ್ದರಂತೆ. ಆ ಮಹಿಳೆ ಅದನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾ, ಅದನ್ನು ಹಲವು ವರ್ಷಗಳ ಕಾಲ ತನ್ನ ವಶದಲ್ಲಿಟ್ಟುಕೊಂಡಿದ್ದಳು ಎನ್ನಲಾಗಿದೆ. ಕೊನೆಗೆ ಹೂವಿನ ಕುಂಡದ ಒಂದು ಭಾಗ ಮುರಿದಾಗ, ಅದನ್ನು ಎಸೆಯುವ ಬದಲು, ಲಂಡನ್‌ನಲ್ಲಿರುವ ತನ್ನ ಮನೆಯ ಹಿಂದಿನ ತೋಟದಲ್ಲಿ ಅಲಂಕಾರಿಕ ಹೂವಿನ ಕುಂಡವಾಗಿ ಇರಿಸಿದ್ದಾರೆ.
(ಏಜೆನ್ಸೀಸ್)
ಇದನ್ನು ತಾಮ್ರದಿಂದ ರಚಿಸಲಾಗಿದ್ದು, ಈ ಹೂವಿನ ಕುಂಡವನ್ನು ನಂತರ ಹರಾಜಿಗೆ ಇಡಲಾಗಿದೆ. ಇದೀಗ ಈ ಕುಂಡ ಹರಾಜಿನಲ್ಲಿ 56 ಲಕ್ಷ ರೂ.ಗೆ ಮಾರಾಟವಾಗಿದೆ.
ಕೆಲ ವರ್ಷಗಳ ನಂತರ ಆಸ್ತಿಯ ಮಾಲೀಕತ್ವವು ಅವರ ಮೊಮ್ಮಕ್ಕಳಿಗೆ ತಲುಪಿದಾಗ, ಅವರು ಹೂವಿನ ಕುಂಡವನ್ನು ಪ್ರಾಚೀನ ವಸ್ತುವೆಂದು ಪರಿಗಣಿಸಿ ಅದರ ಮೌಲ್ಯವನ್ನು ಕಂಡುಹಿಡಿಯಲು ನಿರ್ಧರಿಸಿದ್ದಾರೆ. ನಂತರ ಹರಾಜು ಮನೆಯೊಂದರಲ್ಲಿ ಸೆರಾಮಿಕ್ ತಜ್ಞ ಜೋ ಲಾಯ್ಡ್, ಹೂ ಕುಂಡವನ್ನು ಪರೀಕ್ಷಿಸಿದಾಗ ಅದನ್ನು ಹ್ಯಾನ್ಸ್ ಕೊಪ್ಪರ್ ತಯಾರಿಸಿದ್ದಾರೆಂದು ಕಂಡುಹಿಡಿದಿದ್ದಾರೆ. ಹೂವಿನ ಕುಂಡದ ಕೆಳಭಾಗದಲ್ಲಿ ಒಂದು ಅಂಚೆಚೀಟಿ ಇತ್ತು ಎಂದು ತಿಳಿದು ಬಂದಿದೆ.