ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿ

muniyappa
ಕೋಲಾರ ನಗರದ ಸೋಮೇಶ್ವರ ದೇವಾಲಯದಲ್ಲಿ ಸಚಿವ ಕೆ.ಎಚ್​.ಮುನಿಯಪ್ಪ ಶುಕ್ರವಾರ ಪೂಜೆ ಸಲ್ಲಿಸಿದರು. ಊರುಬಾಗಿಲು ಶ್ರೀನಿವಾಸ್​, ಪ್ರಸಾದ್​ ಬಾಬು, ಜಯದೇವ್​ ಇದ್ದರು.
Published on

ಕೋಲಾರ: ಕೋಲಾರ ಕ್ಷೇತ್ರದಿಂದ ಟಿಕೆಟ್​ ಕೊಡಿ ಎಂದು ಕೇಳಿಲ್ಲ, ಹೈಕಮಾಂಡ್​ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೆವೆ, ಕಾಂಗ್ರೆಸ್​ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳೊವುದು ನಮ್ಮೆಲ್ಲರ ಗುರಿ ಎಂದು ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು.

ನಗರದ ಸಾಯಿಬಾಬ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ನಿಂದ ಯಾರೇ ಅಭ್ಯರ್ಥಿಯಾಗಲಿ ಗೆಲ್ಲಿಸಲು ಶಾಸಕರು, ಮುಖಂಡರ, ಕಾರ್ಯಕರ್ತರನ್ನು ಒಗ್ಗೂಡಿಸಿ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು.
ಕುಟುಂಬಸ್ಥರಿಗೆ ಟಿಕೆಟ್​ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, ನಾನೂ ಸಹ ಹೈಕಮಾಂಡ್​ನಲ್ಲಿ ಕೆಲಸ ಮಾಡಿದ್ದು, ಅದರ ತೀಮಾರ್ನಕ್ಕೆ ಬದ್ಧ ನಾನೂ ಸೇರಿದಂತೆ ಎಲ್ಲ ನಾಯಕರು ಕಾಂಗ್ರೆಸ್​ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಂದಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.
ದಲಿತ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ 9 ಮಂದಿ ಸಚಿವ ಸ್ಥಾನ ಕಲ್ಪಿಸಿದೆ. ಶಾಸಕರು, ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ಅಭ್ಯರ್ಥಿ ನೀಡುವುದು ನಾವಲ್ಲ. ಹೈಕಮಾಂಡ್​. ರಾಜ್ಯದಲ್ಲಿ ಗ್ಯಾರೆಂಟಿಗಳು ಯಶಸ್ವಿಯಾಗಿ ಜನತೆಗೆ ತಲುಪುತ್ತಿವೆ. ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಮುಖಂಡರ ಬೇಡಿಕೆಯಂತೆ ದೇವನಹಳ್ಳಿ ಚುನಾವಣೆ ಬಳಿಕ ಕೋಲಾರದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಅಲ್ಲದೆ ಚರ್ಚ್​, ದರ್ಗಾಗೆ ಭೇಟಿ ನೀಡಿ ಹರಕೆ ತೀರಿಸಿ, ಪ್ರಾರ್ಥಿಸಿಕೊಂಡಿದ್ದೇನೆ. ದೇವರು ಜಿಲ್ಲೆಗೆ ಒಳಿತನ್ನು ಮಾಡಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದು, ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲರೂ ಒಗ್ಗೂಡಿ ಬಾಳಿ ಬದುಕಬೇಕಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಶಾಂತಿ ಇಲ್ಲದಾಗಿದ್ದು, ಗಲಭೆಗಳಾಗಿವೆ. ಜನರಲ್ಲಿ ನೆಮ್ಮದಿ ಇಲ್ಲ. ಅದನ್ನು ತರುವ ಸಲುವಾಗಿ ಕಾಂಗ್ರೆಸ್​ ಅನಿವಾರ್ಯವಾಗಿ ಬರಬೇಕಿದೆ. ರಾಷ್ಟ್ರದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್​ ಪಕ್ಷ ಮಹತ್ವದ ಪಾತ್ರ ವಹಿಸಲಿದೆ ಎಂದರು.
ಕೊತ್ತೂರು ಮಂಜುನಾಥ್​ ಬಲಗೈ ಸಮುದಾಯದ, ಸ್ಥಳಿಯರು ಅಭ್ಯರ್ಥಿಯಾಗಲಿದ್ದಾರೆಂದು ಹೇಳಿರುವುದಕ್ಕೆ ಹಾಗೂ ಇತ್ತೀಚೆಗೆ ನಡೆದ ಎರಡು ಬಣಗಳ ನಡುವಿನ ಮಾರಾಮಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಣ್ಣ ವಿಚಾರಗಳಿಗೆ ನಾನು ಉತ್ತರ ಕೊಡುವುದಿಲ್ಲ. ನೀವು ಅವರನ್ನೇ ಕೇಳಿ ಎಂದು ನುಣುಚಿಕೊಂಡರು.
ಕಾಂಗ್ರೆಸ್​ ಸಮಿತಿ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ, ಉಪಾಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಪ್ರಸಾದ್​ಬಾಬು, ಉದಯ್​ಶಂಕರ್​,

ದೇವಾಲಯ, ದರ್ಗಾ, ಚರ್ಚ್​ಗೆ ಭೇಟಿ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್​.ಮುನಿಯಪ್ಪ ಶುಕ್ರವಾರ ಜನ್ಮ ದಿನದ ಅಂಗವಾಗಿ ದೇವಾಲಯ, ದರ್ಗಾ, ಚರ್ಚ್​ಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇವರಿಗೆ ಕಾಂಗ್ರೆಸ್​ ಟಿಕೆಟ್​ ಸಿಕ್ಕಿದಿಯ ಎಂಬ ಭಾವನೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.
ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ, ಕ್ಲಾಕ್​ ಟವರ್​ ದರ್ಗಾ, ಸಂತ ಮೇರಿಯಮ್ಮ ಚರ್ಚ್​, ನಂತರ ಕೋಲಾರಮ್ಮ, ಸೋಮೇಶ್ವರಸ್ವಾಮಿ, ಸಾಯಿಬಾಬಾ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಹರಿಕೆ ತೀರಿಸಿದರು. ಬಳಿಕ ಎಸ್ಸೆನ್ನಾರ್​ ಜಿಲ್ಲಾಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್​ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net