ಕಂಠೀರವ ಸ್ಟಿಡಿಯೋಸ್ ನಿಂದ ಒಟಿಟಿ; ಸಿಎಂಗೆ ಪತ್ರ|OTT from Kantheerava Studios; Letter to CM

ks
Published on

ಬೆಂಗಳೂರು: ಶ್ರೀ ಕಂಠೀರವ ಸ್ಟುಡಿಯೋಸ್ ನಿಮಗದಿಂದ ಓವರ್-ದಿ-ಟಾಪ್(ಒಟಿಟಿ) ಅಭಿವೃದ್ಧಿಪಡಿಸಲು ಸೂಕ್ತ ಸಹಾಯ(OTT from Kantheerava Studios; Letter to CM) ನೀಡಬೇಕೆಂದು ನಿಗಮದ ಅಧ್ಯಕ್ಷ ಮೆಹಬೂಬ್ ಪಾಷಾ(Mehabub Pasha) ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರಿಗೆ ಮನವಿ ಮಾಡಿದ್ದಾರೆ.

ನಿಮಗದ 310ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಕುರಿತು ಈಗಾಗಲೇ ಅನುಮೋದನೆ ನೀಡಲಾಗಿದೆ. ಒಟಿಟಿ ಮಾದರಿಯನ್ನು ನಿಗಮದಿಂದಲೇ ಸ್ವಂತಕ್ಕೆ ಅಭಿವೃದ್ಧಿಪಡಿಸಿ ಅದರ ಮುಖಾಂತರ ಕನ್ನಡ ಸಿನಿಮಾಗಳು ಜತೆಗೆ ಬೇರೆ ಬೇರೆ ಭಾಷೆಯ ಸಿನಿಮಾಗಳಣ್ನು ಸಹ ಖರೀದಿ ಮಾಡಿ ಪ್ರದರ್ಶನ ಮಾಡಿದರೆ ನಿಗಮಕ್ಕೂ ಲಾಭವಾಗುವುದಲ್ಲದೆ ನುರಿತ ಉದ್ಯೋಗಿಗಳಿಗೆ, ಕಲಾವಿದರು ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬಹುದಾಗಿದೆ. ಆದ್ದರಿಂದ ಒಟಿಟಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಸೂಕ್ತ ಸಹಾಯ ಹಾಗೂ ಕ್ರಮ ಜರುಗಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮೆಹಬೂಬ್ ಪಾಷಾ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net