

Samajwadi MP: ದೇಶಕ್ಕೆ ಏಕತೆ ಮತ್ತು ಸಹೋದರತ್ವದ ಅಗತ್ಯವಿದೆ ಎಂದು ಇತ್ತೀಚೆಗೆ ಮಾತನಾಡಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಬೆಂಬಲಿಸಿರುವ ಸಮಾಜವಾದಿ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ, ಇತರ ಧಾರ್ಮಿಕ ಮುಖಂಡರು ಸಹ ಈ ಪಾಠ ಕಲಿಯಬೇಕು ಎಂದಿದ್ದಾರೆ.
ಗಾಜಿಪುರದಲ್ಲಿ ನಡೆದ ವಿದ್ಯುತ್ ಪೂರೈಕೆಯ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅನ್ಸಾರಿ, ಏಕತೆ ಮತ್ತು ಸಹೋದರತ್ವದ ಕುರಿತು ಭಾಗವತ್ ಅವರ ಇತ್ತೀಚಿನ ಹೇಳಿಕೆಗಳನ್ನು ಸ್ವಾಗತಿಸಿದರು.
ಆರ್‌ಎಸ್‌ಎಸ್ ಬಿಟ್ಟರೆ ವಿಶ್ವದಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸುವ ದೊಡ್ಡ ಸಂಘಟನೆ ಇನ್ನೊಂದಿಲ್ಲ, ಪ್ರತಿಯೊಂದು ದೇವಾಲಯಗಳಲ್ಲಿ ಶಿವಲಿಂಗವನ್ನು ಹುಡುಕುತ್ತಿರವುದು ದೇಶವನ್ನು ದುರ್ಬಲಗೊಳಿಸುತ್ತಿದೆ, ಭಾಗವತ್ ಅವರ ಹೇಳಿಕೆಯನ್ನು ಇತರರ ಅನುಸರಿಸುವುದು ಸೂಕ್ತ ಎಂದರು.
ಇಸ್ಲಾಂ ಹೊಸ ಧರ್ಮವಲ್ಲ, ಅದು ಶತಮಾನಗಳಿಂದ ಭಾರತ ಅವಿಭಾಜ್ಯ ಅಂಗವಾಗಿದ್ದು, ಈ ಸತ್ಯವನ್ನು ಭಾಗವತ್ ಸಹ ಒಪ್ಪಿಕೊಂಡಿದ್ದಾರೆ. ಪ್ರಧಾನಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಹೆಸರು ಹೇಳದೆ ಟೀಕಿಸಿದ ಅನ್ಸಾರಿ, ದೆಹಲಿಯಲ್ಲಿ ಕುಳಿತಿರುವ ಯಜಮಾನನಿಗೆ ಮತ್ತು ಉತ್ತರ ಪ್ರದೇಶದಲ್ಲಿ ಕುಳಿತಿರುವವರಿಗೆ ಕುಟುಂಬವಿಲ್ಲ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಎಸ್‌ಪಿ ಶಾಸಕ ಜೈ ಕಿಶನ್ ಸಾಹು, ಪ್ರಯತ್ನ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದಕ್ಕೆ ಮರಳಿ ಪ್ರತಿಕ್ರಿಯೆ ನೀಡಿದ ಅನ್ಸಾರಿ ನಾನು ಪರವಾನಗಿ ಪಡೆದಿರುವ ಕುಟುಂಬದ ಬಗ್ಗೆ ಮಾತನಾಡುತ್ತಿದ್ದೇನೆ, ಪರವಾನಗಿ ಇಲ್ಲದ ಕುಟುಂಬದ ಬಗ್ಗೆ ಅಲ್ಲ. ದೇವರು ಅವರಿಗೆ ಮಕ್ಕಳನ್ನು ನೀಡದಿರುವುದು ಅವರ ದುರದೃಷ್ಟ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)