

ಅರಸೀಕೆರೆ: ತಾಲೂಕಿನ ಜಾವಗಲ್ ಹೋಬಳಿ ದೇಶಾಣಿ ಹಾಗೂ ಸುತ್ತಮುತ್ತಲಿನ ಗ್ರಾಮದೇವತೆ ಓತನಕಲ್ಲಮ್ಮ ದೇವಿ ರಥೋತ್ಸವ ಶುಕ್ರವಾರ ಬೆಳಗ್ಗೆ ನೆರವೇರಿತು.
ಸರ್ವಾಲಂಕೃತ ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿ ಬಾಳೆ ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಗೇರುಮರ, ಹಂದ್ರಾಳು, ದೇಶಾಣಿ ಗೊಲ್ಲರಹಟ್ಟಿ, ಕುರಾದಳ್ಳಿ, ಮಠದಹೊಸಳ್ಳಿ, ಭೈರಾಂಬುಧಿ, ಸಿಂಗನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು. ಚೆಲುವರಾಯ, ಧೂತರಾಯಸ್ವಾಮಿ ಕುಣಿತ ಎಲ್ಲರನ್ನೂ ಭಕ್ತಿ ಪರವಶರನ್ನಾಗಿಸಿತು.