ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ ದಕ್ಷಿಣ ಕೊರಿಯನ್​ ಪಾರಸೈಟ್​ ಚಿತ್ರ; ಹೀಗಿದೆ ಪ್ರಶಸ್ತಿ ಪಡೆದ ಚಿತ್ರಗಳ ಪಟ್ಟಿ

OSCOR FINAL
Published on

ಲಾಸ್​ ಏಂಜಲೀಸ್‌: ದಕ್ಷಿಣ ಕೊರಿಯನ್​ ಸಿನಿಮಾ ಪಾರಸೈಟ್​ ಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್​ ಮೂರು ಪ್ರಶಸ್ತಿ ಸಂದಿದ್ದು ಇತಿಹಾಸವನ್ನೇ ಸೃಷ್ಟಿಸಿದೆ. ಈವರೆಗೆ ಇಂಗ್ಲಿಷೇತರ ಚಿತ್ರಗಳಿಗೆ ಆಸ್ಕರ್​ ಒಲಿದಿರಲಿಲ್ಲ. ಆದರೆ ಈಗ ದಕ್ಷಿಣ ಕೊರಿಯಾದ ಸಿನಿಮಾಕ್ಕೆ ಆಸ್ಕರ್​ ಸಂದಿದೆ.

ಪಾರಸೈಟ್​ ಚಿತ್ರದ ನಿರ್ದೇಶಕ ಬೊಂಗ್​ ಜೂನ್​ ಹೊ ಅವರಿಗೂ ಅತ್ಯುತ್ತಮ ಚಿತ್ರ ನಿರ್ದೇಶಕ ಪ್ರಶಸ್ತಿ ಸಂದಿದೆ. ಇದರ ಜತೆಗೆ ಇನ್ನು ಎರಡು ಪ್ರಶಸ್ತಿಗಳು ಪಾರಸೈಟ್​ ಚಿತ್ರದ ಮುಡಿಗೇರಿವೆ. ಅತ್ಯುತ್ತಮ ಮೂಲ ಚಿತ್ರಕಥೆ ಮತ್ತು ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಸಿನಿಮಾ ಪ್ರಶಸ್ತಿಯ ಹೆಗ್ಗಳಿಕೆ ಪಾರಸೈಟ್​ನದ್ದು.

ಜೊವಾಕ್ವಿನ್ ಫೀನಿಕ್ಸ್ ಜೋಕರ್​ ಸಿನಿಮಾದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಜೂನಿ ಚಿತ್ರಕ್ಕಾಗಿ ರೆನೀ ಜೆಲ್ವೆಗರ್ ಅತ್ಯುತ್ತಮ ನಟಿ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಆಸ್ಕರ್​ ಪ್ರಶಸ್ತಿ ಪುರಸ್ಕೃತರ ಅಂತಿಮ ಪಟ್ಟಿ ಇದು...

ಅತ್ಯುತ್ತಮ ಚಿತ್ರ: ಪಾರಸೈಟ್​

ಅತ್ಯುತ್ತಮ ನಟಿ (ಮುಖ್ಯಪಾತ್ರ): ರೆನೀ ಜೆಲ್ವೆಗರ್, ಚಿತ್ರ: ಜೂನಿ

ಅತ್ಯುತ್ತಮ ನಟ (ಮುಖ್ಯಪಾತ್ರ): ಜೊವಾಕ್ವಿನ್ ಫೀನಿಕ್ಸ್, ಚಿತ್ರ: ಜೋಕರ್​

ಅತ್ಯುತ್ತಮ ನಿರ್ದೇಶಕ: ಬೊಂಗ್​ ಜೂನ್​ ಹೊ, ಚಿತ್ರ: ಪಾರಸೈಟ್​

ಅತ್ಯುತ್ತಮ ನಟ (ಪೋಷಕ ಪಾತ್ರ): ಬ್ರಾಡ್​ ಫಿಟ್​, ಚಿತ್ರ: ಒನ್ಸ್​ ಅಪಾನ್​ ಎ ಟೈಮ್​ ಇನ್​ ಹಾಲಿವುಡ್​

ಅತ್ಯುತ್ತಮ ನಟಿ (ಪೋಷಕ ಪಾತ್ರ): ಲೌರಾ ಡೆರ್ನ್​, ಚಿತ್ರ; ಮ್ಯಾರೇಜ್​ ಸ್ಟೋರಿ

ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಸಿನಿಮಾ: ಪಾರಾಸೈಟ್​ (ದಕ್ಷಿಣ ಕೋರಿಯನ್​)

ಅತ್ಯುತ್ತಮ ಚಿತ್ರಕಥೆ: ಜೊಜೊ ರ‍್ಯಾಬಿಟ್​

ಅತ್ಯುತ್ತಮ ಚಿತ್ರಕತೆ: ಪಾರಸೈಟ್​

ಅತ್ಯುತ್ತಮ ಆನಿಮೇಟೆಡ್ ಚಲನಚಿತ್ರ: ಟಾಯ್​ ಸ್ಟೋರಿ-4

ಅತ್ಯುತ್ತಮ ಸಾಕ್ಷ್ಯಚಿತ್ರ: ಅಮೆರಿಕನ್​ ಫ್ಯಾಕ್ಟರಿ

ಅತ್ಯುತ್ತಮ ಸಂಗೀತ ಸಂಯೋಜನೆ: 1917

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net