ಆಸ್ಕರ್ ವೇದಿಕೆಯಲ್ಲೇ ಸಹನಟನಿಗೆ ಕಪಾಳ ಮೋಕ್ಷ: ಭಾವನಾತ್ಮಕವಾಗಿ ಕ್ಷಮೆ ಕೇಳಿದ ನಟ ವಿಲ್ ಸ್ಮಿತ್ !

will smith
Published on

ಪ್ರತಿಷ್ಠಿತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆ ಮೇಲೆ ಹಾಸ್ಯ ನಟ, ನಿರೂಪಕ ಕ್ರಿಸ್​ ರಾಕ್ ಅವರ ಕಪಾಳಕ್ಕೆ ನಟ ವಿಲ್​ ಸ್ಮಿತ್ ಹೊಡೆದ ಘಟನೆ ಸಾಕಷ್ಟು ಸುದ್ದಿಯಾಗಿದ್ದು, ಎಲ್ಲರಿಗೂ ಗೊತ್ತಿದೆ. ಈಗ ಘಟನೆ ಬಗ್ಗೆ ಖುದ್ದು ವಿಲ್​ ಸ್ಮಿತ್​ ಕ್ಷಮೆಯಾಚಿಸಿದ್ದಾರೆ.

ಪತ್ನಿ ಜಡಾ ಪಿಂಕೆಟ್ ಬಗ್ಗೆ ಕ್ರಿಸ್​ ರಾಕ್ ಗೇಲಿ ಮಾಡಿದ್ದಕ್ಕೆ ಕೋಪಗೊಂಡಿದ್ದ ವಿಲ್​ ಸ್ಮಿತ್ ವೇದಿಕೆ ಮೇಲೆಯೇ ಕಪಾಳಕ್ಕೆ ಬಾರಿಸಿದ್ದರು. ಆದರೆ, ವಿಲ್​ ಸ್ಮಿತ್ ವರ್ತನೆ ಬಗ್ಗೆ ಪರ ಮತ್ತು ವಿರೋಧವಾದ ಹೇಳಿಕೆಗಳು ಕೇಳಿ ಬರುತ್ತಿದ್ದವು. ವೇದಿಕೆಗೆ ತೋರಿದ ಅಗೌರವ ಎಂದೂ ಕೆಲವರು ಬೇಸರ ವ್ಯಕ್ತಪಡಿಸಿದರು.

ಇದೀಗ ಈ ಘಟನೆ ಬಗ್ಗೆ ಇನ್​​​​ಸ್ಟಾಗ್ರಾಂ ಪೋಸ್ಟ್​ ಮಾಡಿರುವ ವಿಲ್ ಸ್ಮಿತ್, ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಹಿಂಸಾಚಾರವು ಎಲ್ಲ ರೀತಿಯಿಂದಲೂ ವಿಷಕಾರಿ ಮತ್ತು ವಿನಾಶಕಾರಿಯಾಗಿದೆ. ಅಲ್ಲದೇ, ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದ ವೇದಿಕೆ ಮೇಲೆ ನಾನು ತೋರಿದ ವರ್ತನೆ ಸ್ವೀಕಾರಾರ್ಹವಲ್ಲ ಹಾಗೂ ಅದನ್ನು ಕ್ಷಮಿಸಲಾಗದು. ನಾನು ತಪ್ಪು ಮಾಡಿದ್ದೇನೆ ಎಂದು ಹಾಲಿವುಡ್​​ ನಟ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net