ಗರ್ಭಿಣಿ ದೀಪಿಕಾ ಜತೆ ಓರಿ ಸಿಗ್ನೇಚರ್​ ಫೋಸ್​​​ ಫೋಟೋ ವೈರಲ್​​​​; ನೆಟ್ಟಿಗರು ಗರಂ

Untitled-design-2024-07-10T161340.342
Published on

ಮುಂಬೈ: ಬಾಲಿವುಡ್​ ನಟ-ನಟಿಯರ ಆಪ್ತ ಒರ್ಹಾನ್​ ಅವತ್ರಮಣಿ ಅಲಿಯಾಸ್​ ಅಕಾ ಓರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೆಲೆಬ್ರಿಟಿ ಸ್ಟಾರ್​ಗಳ ಜತೆ ತನ್ನದೇ ಆದ ವಿಶಿಷ್ಟ ಸಿಗ್ನೇಚರ್​ ಫೋಸ್​​ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈಗ ಇದೇ ರೀತಿ ಸಿಗ್ನೇಚರ್​ ಫೋಸ್​​ ಕೊಟ್ಟು ತೆಗೆಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಆ ಫೋಟೋಗೆ ಸಾಕಷ್ಟು ಕಾಮೆಂಟ್​​ಗಳು ಬರುತ್ತಿವೆ.

ಇತ್ತೀಚೆಗಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ದೀಪಿಕಾ ನೇರಳೆ ಬಣ್ಣದ ಸೀರೆ ಉಟ್ಟು ಎಲ್ಲರ ಗಮನ ಸೆಳೆದಿದ್ದರು. ಇದೇ ಸಮಾರಂಭಕ್ಕೆ ತೆರಳಿದ್ದ ಅಕಾ ಓರಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅಕಾ ಓರಿ ದೀಪಿಕಾ ಅವರ ಬೇಬಿ ಬಂಪ್​​ ಮೇಲೆ ಕೈಯಿಟ್ಟು ಫೋಸ್​ ಕೊಟ್ಟಿದ್ದಾರೆ. ಅಲ್ಲದೆ ಫೋಟೋದಲ್ಲಿ ರಣವೀರ್​​ ಸಿಂಗ್​​ ಕೂಡ ಇದ್ದಾರೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.

ಸದ್ಯ ಈ ಫೋಟೋಗೆ ನೆಟ್ಟಿಗರು ಗರಂ ಆಗಿದ್ದು ಕಾಮೆಂಟ್​ಗಳು ಬರುತ್ತಿವೆ. ಅಕಾ ಓರಿಗೆ ಬೇಬಿ ಬಂಪ್​ ಮೇಲೆ ಕೈಯಿಡಲು ದೀಪಿಕಾ ಯಾಕೆ ಅವಕಾಶ ಮಾಡಿಕೊಟ್ಟರು ಎಂದು ಕೆಲವರು ಆಕ್ರೋಸ ಹೊರಹಾಕಿದರೆ, ಮತ್ತೆ ಕೆಲವರು ಓರಿ ದೀಪಿಕಾ ಬೇಬಿ ಬಂಪ್​ ಮೇಲೆ ಕೈಯಿಟ್ಟ ತಕ್ಷಣ ರಣವೀರ್​ ಸಿಂಗ್​​​ ಆತನ ಕುತ್ತಿಗೆಯನ್ನು ಹಿಡಿದಿದ್ದಾರೆ ಎಂದು ಟಾಂಟ್​ ಕೊಟ್ಟಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಓಕಾ ಅವರ ಸಿಗ್ನೇಚರ್​​​​ ಫೋಸ್​​​ ಫೋಟೋ ಸಖತ್​ ಸೌಂಡ್​ ಮಾಡುತ್ತಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net