ಬಾಲಿವುಡ್​ ತಾರೆಗಳ ಜತೆ ಕಾಣಿಸಿಕೊಳ್ಳುವ ಓರ್ರಿ ಯಾರು? ಸಾರಾ ಹೇಳಿದ್ದೇನು?

orry
Published on

Orhan Awatramani aka Orry has been the most discussed topic in the tinsel town

ನವದೆಹಲಿ: ಥಳಕು - ಬಳುಕಿನ ಜಗತ್ತಿನ ಪ್ರಪಂಚದಲ್ಲಿ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿರುವ ಹೆಸರು 'ಓರ್ರಿ ಅಕಾ ಒರ್ಹಾನ್ ಅವತ್ರಾಮಣಿ'. ಚಿತ್ರರಂಗದಲ್ಲಿ ಎಲ್ಲೂ ಕೆಲಸ ಮಾಡದ ಈತ ಬಾಲಿವುಡ್​ ತಾರೆಗಳೊಂದಿಗೆ ಕಾಣಿಸಿಕೊಳ್ಳುತ್ವತಿದ್ದು, ನೆಟ್ಟಿಗರು ಈತನ ಬಗ್ಗೆ ಕುತೂಹಲ ಮತ್ತು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಓರ್ರಿ ಅಕಾ ಓರ್ಹಾನ್ ಅವತ್ರಮಣಿ ಇತ್ತೀಚೆಗೆ ಪ್ರಸಿದ್ಧ ಬಾಲಿವುಡ್ ತಾರೆಗಳೊಂದಿಗೆ ಸುತ್ತಾಡುವುದು, ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗುವುದು ಮತ್ತು ಅವರೊಂದಿಗೆ ಪಾಪ್‌ಗಳಿಗೆ ಪೋಸ್ ನೀಡುವುದು ಕಂಡುಬರುತ್ತದೆ. ಇದನ್ನು ಕಂಡು ಚಕಿತರಾಗಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಆತನ ಕುಟುಂಬದ ಹಿನ್ನೆಲೆ, ಕೆಲಸದ ವಿವರ, ಆದಾಯದ ಮೂಲ ಮತ್ತಿತರ ವಿಷಯಗಳ ಕುರಿತು ಪ್ರಶ್ನಿಸುತ್ತಿದ್ದಾರೆ.

ಕಾಫಿ ವಿತ್ ಕರಣ್ 8 ರ ಇತ್ತೀಚಿನ ಸಂಚಿಕೆಯಲ್ಲಿ ಅನನ್ಯ ಪಾಂಡೆ ಮತ್ತು ಸಾರಾ ಅಲಿ ಖಾನ್ ಸಹ ಓರಿ ಬಗ್ಗೆ ಮಾತನಾಡಿದ್ದಾರೆ, ಇದನ್ನು ನೋಡಿದ ನೆಟ್ಟಿಗರು ಈ ಪರಿ ಪ್ರಖ್ಯಾತಿ ಗಳಿಸಿರುವುದಕ್ಕೆ ಕಾರಣವೇನು ಎಂದು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

'ಯಾರಿವನು'?: ಓರ್ರಿ ಅಕಾ ಓರ್ಹಾನ್ ಅವತ್ರಮಣಿ ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮುಂಬೈನ ಉದ್ಯಮಿ ಸೂರಜ್ ಕೆ ಅವತ್ರಮಣಿ ಮತ್ತು ಶಹನಾಜ್ ಅವತ್ರಮಣಿ ಪುತ್ರನಾಗಿದ್ದಾನೆ. ಶ್ರೀಮಂತ ಕುಟುಂಬದಿಂದ ಬಂದವನಾದ್ದರಿಂದ ಈತ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಪ್ರಖ್ಯಾತ ವ್ಯಕ್ತಿಗಳ ಮಕ್ಕಳೊಂದಿಗೆ ಅಮೆರಿಕಾದಲ್ಲಿ ಅಧ್ಯಯನ ಮಾಡಿದ್ದಾನೆ. ಹೀಗಾಗಿ ಅವರ ಪರಿಚಯ ಈತನಿಗಿದೆ. ಈತನ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಸ್ವತಃ ತನ್ನ ವಿವರ ಬಾಲಿವುಡ್​ನ ಎ-ಲಿಸ್ಟರ್‌ಗಳೊಂದಿಗೆ ಗುರುತಿಸಿಕೊಳ್ಳುವುದರ ಬಗ್ಗೆ ಬಹಿರಂಗಪಡಿಸಿದ್ದಾನೆ.

ಇನ್ನು ಈತ ಕಳೆದ ಆರು ವರ್ಷಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಲ್ಲಿ ವಿಶೇಷ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದ್ದು, ಕಾಫಿ ವಿತ್​ ಕರಣ್​ ಇತ್ತೀಚಿನ ಸಂಚಿಕೆಯಲ್ಲಿ ಸಾರಾ ಮತ್ತು ಅನನ್ಯರನ್ನು ಓರಿ ನಿಗೂಢ ಕೆಲಸದ ವಿವರವನ್ನು ಕರಣ್ ಜೋಹರ್ ಕೇಳಿದ್ದಾರೆ.

"ಓರ್ರಿ ಯಾರು? ಜಗತ್ತು ಆತನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತದೆ ಎಂದಾಗ "ಅವನು ಅನೇಕ ವಿಷಯಗಳ ಮನುಷ್ಯ. ಅವನು ನಿಜವಾಗಿಯೂ ತಮಾಷೆಯ ವ್ಯಕ್ತಿ” ಎಂದು ಸಾರಾ ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net