ಅಹಿತಕರ ಘಟನೆ ನಡೆದರೆ ಸಂಘಟಕರೇ ಹೊಣೆ

SP Vikram Amate
ಎಸ್‌ಪಿ ವಿಕ್ರಮ ಅಮಟೆ
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಇದರ ಮಧ್ಯೆಯೂ ಅಹಿತಕರ ಘಟನೆ ನಡೆದಲ್ಲಿ ಸಂಬಂಧಿಸಿದ ಗಣೇಶೋತ್ಸವ ಸಮಿತಿಗಳನ್ನು ಹೊಣೆ ಮಾಡಲಾಗುವುದು ಎಂದು ಎಸ್‌ಪಿ ವಿಕ್ರಮ ಅಮಟೆ ಹೇಳಿದರು.
ಗಣೇಶೋತ್ಸವದ ವೇಳೆ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಲು ಅವಕಾಶವಿದೆ. ಆದರೆ ರಾತ್ರಿ 10 ಗಂಟೆ ಒಳಗೆ ಕಾರ್ಯಕ್ರಮ ಮುಗಿಸಬೇಕು. ಜತೆಗೆ ಗಣಪತಿ ವಿಸರ್ಜನೆಯನ್ನು ರಾತ್ರಿ 10 ಗಂಟೆ ಒಳಗೆ ಮುಗಿಸಬೇಕು ಎಂದು ಎಸ್ಪಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಂತಿಯುತ ಗಣೇಶೋತ್ಸವ ನಡೆಸುವಲ್ಲಿ ಸಂಘಟಕರ ಜವಾಬ್ದಾರಿ ಹೆಚ್ಚಿರುತ್ತದೆ. ಹೀಗಾಗಿ ಪೊಲೀಸ್ ಇಲಾಖೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಬ್ಬದ ಸಂದರ್ಭದಲ್ಲಿ ಆಯಾ ಪ್ರದೇಶದ ಸೂಕ್ಷ್ಮತೆಗೆ ಅನುಗುಣವಾಗಿ ಬಂದೋಬಸ್ತ್ ನಿಯೋಜಿಸುತ್ತೇವೆ. ಪೊಲೀಸ್ ಬಂದೋಬಸ್ತ್ ಜತೆಗೆ ಸಂಘಟಕರು ಬಂದೋಬಸ್ತ್‌ಗಾಗಿ ಸ್ವಯಂ ಸೇವಕರನ್ನು ನೀಡಬೇಕು. ಹಬ್ಬದ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡುವವರು ಹಾಗೂ ಸಾಂಪ್ರದಾಯಬದ್ದವಾಗಿ ಹಬ್ಬ ಆಚರಿಸುವವರಿಗೆ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುವುದು. ಸಹಕಾರ ನೀಡದವರ ಮೇಲೆ ನಿಗಾವಹಿಸಲಾಗುವುದು. ಮುಂದಿನ ದಿನಗಳಲ್ಲಿ ಅವರಿಗೆ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net