

ಬೆಂಗಳೂರು: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸ್ಟೂಡೆಂಟ್ ಅಚೀವ್ವೆುಂಟ್ ಟ್ರಾಕಿಂಗ್ ಸಿಸ್ಟಂ (ಎಸ್ಎಟಿಎಸ್) ಮೂಲಕ ಅಪ್ಲೋಡ್ ಮಾಡಿ ಮತ್ತು ಕಡಿಮೆ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ತರಗತಿ ನಡೆಸಿ ಮುಂದಿನ ತರಗತಿಗೆ ಬಡ್ತಿ ನೀಡಿ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ.
1ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪಾಸ್ ಮಾಡುವಂತೆ ಸೂಚನೆ ನೀಡಲಾಗಿದ್ದು, ತಂತ್ರಾಂಶದ ಮೂಲಕ ವಿದ್ಯಾರ್ಥಿಗಳು ಮತ್ತು ಶಾಲಾವಾರು ಫಲಿತಾಂಶವನ್ನು ಪಡೆಯಲಾಗುತ್ತಿದೆ. ಯಾವುದೇ ವಿದ್ಯಾರ್ಥಿ ಕಡಿಮೆ ಅಂಕ ಗಳಿಸಿ ಅನುತ್ತೀರ್ಣರಾಗಿದ್ದಲ್ಲಿ, ಅಂತಹ ವಿದ್ಯಾರ್ಥಿಗೆ ಎಸ್ಎಟಿಎಸ್ ತಂತ್ರಾಂಶದಲ್ಲಿ ಈಗಾಗಲೇ ನೀಡಿರುವ ಮಾದರಿಯಂತೆ ಪರಿಹಾರ ಬೋಧನೆ ಅಥವಾ ಆನ್ಲೈನ್ ತರಗತಿ ನಡೆಸಿ ಉತ್ತೀರ್ಣಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಶಿಕ್ಷಕರ ರಜೆ ವಿಸ್ತರಣೆ: ಕರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲಾ ಶಿಕ್ಷಕರಿಗೆ ಮನೆಯಿಂದಲೇ ಸೇವೆ ಸಲ್ಲಿಸಲು ನಿಗದಿ ಪಡಿಸಿದ್ದ ದಿನಾಂಕವನ್ನು ಏ.30ರ ವರೆಗೂ ವಿಸ್ತರಿಸಿದೆ.