ಗ್ರಾಹಕನಿಗೆ ಹೊಸ ಮೊಬೈಲ್ ಕೊಡಲು ಆದೇಶ

web 66
Published on

ಧಾರವಾಡ: ದೋಷಪೂರಿತ ಮೊಬೈಲ್ ಮಾರಾಟ ಮಾಡಿದ್ದ ಕಂಪನಿಯು, ಗ್ರಾಹಕನಿಗೆ ಹೊಸ ಮೊಬೈಲ್ ಕೊಡಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ನಗರದ ಮಹೇಂದ್ರಕರ ಚಾಳ ನಿವಾಸಿ ಕಾರ್ತಿಕ ಯಲಿಗಾರ ಕಾಲೇಜ್ ವಿದ್ಯಾರ್ಥಿಯಾಗಿದ್ದು, ಗಿಟಾರ್ ವಾದ್ಯ ಕಲಿಯುತ್ತಿದ್ದರು. ವಿದ್ಯಾಭ್ಯಾಸ ಮತ್ತು ಗಿಟಾರ್ ಕಲಿಯಲು ಫ್ಲಿಪ್‌ಕಾರ್ಟ್ ಮೂಲಕ 2022ರ ಸೆ. 25ರಂದು 54,019 ರೂಪಾಯಿ ಮೌಲ್ಯದ ಆ್ಯಪಲ್ ಐ ಫೋನ್ ಖರೀದಿಸಿದ್ದರು. ಮಾರನೇ ದಿನ ದೋಷ ಕಂಡುಬAದಿತ್ತು. ಗ್ರಾಹಕ ಈ ವಿಷಯವನ್ನು ಫ್ಲಿಪ್‌ಕಾರ್ಟ್ ಹಾಗೂ ಐ ಫೋನ್ ಕಂಪನಿಗೆ ಮಾಹಿತಿ ನೀಡಿದ್ದರು. ಮೊಬೈಲ್ ಉತ್ಪಾದಕರ ಸೂಚನೆಯಂತೆ ಹುಬ್ಬಳ್ಳಿ ಮತ್ತು ಬೆಂಗಳೂರಿನ ಸರ್ವೀಸ್ ಸೆಂಟರ್‌ಗಳಲ್ಲಿ ತಪಾಸಣೆ ಮಾಡಿಸಿದಾಗ ದೋಷ ಇರುವುದು ಖಚಿತವಾಗಿತ್ತು. ಉಚಿತವಾಗಿ ದುರಸ್ತಿ ಮಾಡಿಕೊಡದ ಹಿನ್ನೆಲೆಯಲ್ಲಿ ಗ್ರಾಹಕ, ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ, ಕಂಪನಿಯು ಸೇವಾ ನ್ಯೂನತೆ ಎಸಗಿರುವುದು ಮೇಲ್ನೊಟಕ್ಕೆ ಕಂಡುಬAದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಳೆಯ ಫೋನ್ ವಾಪಸ್ ಪಡೆದು ಹೊಸ ಫೋನ್ ಕೊಡಬೇಕು. ತಪ್ಪಿದರೆ ಫೋನಿನ ಮೊತ್ತ ೫೪,೦೧೯ ರೂ. ಮತ್ತು ಅದರ ಮೇಲೆ ಶೇ. ೮ರಂತೆ ಬಡ್ಡಿ ಹಣ ಸಂದಾಯ ಮಾಡುವಂತೆ ಆಯೋಗ ತಿಳಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ೨೫,೦೦೦ ರೂ. ಪರಿಹಾರ ಹಾಗೂ ೧೦,೦೦೦ ರೂ. ಪ್ರಕರಣದ ಖರ್ಚು ವೆಚ್ಚ ನೀಡಬೇಕು ಎಂದು ಆಯೋಗ ನಿರ್ದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net