ರಜೆ ನಗದೀಕರಣ ಪಡೆಯಲು ಆದೇಶ| Encashment of leave

Vidhanasoudha
Published on

ಬೆಂಗಳೂರು: ರಾಜ್ಯ ಸರ್ಕಾರ 2025ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯ(Order to get encashment of leave) ನಿಯತಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.

2025ನೇ ಸಾಲಿನ ಬ್ಲಾಕ್ ಅವಧಿಗೆ ಎಲ್ಲ ವೃಂದದ ಸರ್ಕಾರಿ ಅಧಿಕಾರಿ/ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ/ಅನುದಾನ ಪಡೆಯುವ ಅಥವಾ ಪಡೆಯದಿರುವ ಎಲ್ಲ ಸಂಸ್ಥೆ/ಉದ್ಯಮಗಳ ನೌಕರರಿಗೂ ಸಂಬಂಧಿತ ಸಂಸ್ಥೆ/ಉದ್ಯಮಗಳ ಆರ್ಥಿಕ ಸ್ಥಿತಿಗತಿಗೆ ಒಳಪಟ್ಟು ಗರಿಷ್ಠ 15 ದಿನಗಳಿಗೆ ಮೀರದಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ರಜಾ ವೇತನಕ್ಕೆ ಸಮನಾದ ನಗದೀಕರಣ ಸೌಲಭ್ಯ ಜಾರಿಗೊಳಿಸಿದೆ.

ಈ ಸೌಲಭ್ಯ ಜನವರಿ 1, 2025 ರಿಂದ ಡಿಸೆಂಬರ್ 31, 2025 ರ ವರೆಗೆ ಜಾರಿಯಲ್ಲಿರುತ್ತದೆ.

ಈ ಸೌಲಭ್ಯವನ್ನು ಅರ್ಹ ಸರ್ಕಾರಿ ಅಧಿಕಾರಿ/ನೌಕರರು ಒಂದು ತಿಂಗಳ ಮುಂಚಿತವಾಗಿ ಮನವಿ ಮಾಡಿ ಅವರ ಇಚ್ಚೆಯ ಯಾವುದೇ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಸೌಲಭ್ಯ ಪಡೆಯಬಹುದು ಎಂದು ಆರ್ಥಿಕ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net