

ಕೋಲಾರ/ಚಿಕ್ಕಬಳ್ಳಾಪುರ: ರೈಲ್ವೆ ನಿಲ್ದಾಣಗಳಿಗೆ ಸೌಕರ್ಯವನ್ನು ಮತ್ತಷ್ಟು ಹೆಚ್ಚಳ ಮಾಡಬೇಕೆಂಬ ಒತ್ತಡದ ನಡುವೆಯೇ ರೈಲ್ವೆ ಇಲಾಖೆಯು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕೆಲ ನಿಲ್ದಾಣಗಳನ್ನು ಡಿ.1ರಿಂದ ಮುಚ್ಚಲು ಆದೇಶ ಹೊರಡಿಸಿದೆ.
ರೈಲ್ವೆಯ 6 ನಿಲ್ದಾಣಗಳ ಮುಚ್ಚಲ್ಪಡುತ್ತಿದೆ. ಇದಕ್ಕೆ ಪ್ರಯಾಣಿಕರಿಗೆ ಟಿಕೆಟ್ ನೀಡಲು ನಿಲುಗಡೆ ಏಜೆಂಟ್ಗಳಿಲ್ಲ, ಆದಾಯ ಸಿಗುತ್ತಿಲ್ಲ ಎಂಬ ಕಾರಣ ನೀಡಿದ್ದು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಮಾರ್ಗದ ದೊಡ್ಡಜಾಲ, ಆವತಿ, ಚಿಕ್ಕಬಳ್ಳಾಪುರದ ಗಿಡ್ನಹಳ್ಳಿ, ಕೋಲಾರದ ಹುಡುಕುಲ ಮತ್ತು ಜನ್ನಟ್ಟ, ಆಂಧ್ರದ ಕೊತ್ತಚೆರವು ನಿಲ್ದಾಣ ಮುಚ್ಚಲು ಹೊರಟಿದ್ದು, ಡಿ.1ರಿಂದ ಕೆಲಸ ಸ್ಥಗಿತಗೊಳಿಸಲಿವೆ.
ಪ್ರಸ್ತುತ ಮುಚ್ಚಲ್ಪ ಡುತ್ತಿರುವ ನಿಲ್ದಾಣಗಳ ನಿರ್ವ ಹಣೆಗೆ ಏಜೆಂಟ್ಗಳು ಒಲವು ತೋರುತ್ತಿಲ್ಲ. ಇದಕ್ಕೆ ನಿರೀೆಗೆ ಅನುಗುಣವಾಗಿ ಆದಾಯ ಬರುತ್ತಿಲ್ಲ. ನಿಲ್ದಾಣಗಳಲ್ಲಿ ಖರೀದಿಯಾಗುವ ಟಿಕೆಟ್ ಪ್ರಮಾಣದ ಲೆಕ್ಕಾಚಾರದಲ್ಲಿ ಏಜೆಂಟರಿಗೆ ಕಮಿಷನ್ ನೀಡಲಾಗುತ್ತಿದೆ. ಇದರ ನಡುವೆ ಕೆಲವೆಡೆ 1 ಸಾವಿರ ರೂ. ಆದಾಯ ಸಹ ಸಿಗುತ್ತಿಲ್ಲ. ಇದರಿಂದ ನಿರ್ವಹಣೆ ಕಷ್ಟಕರವಾಗಿದ್ದು, ಟಿಕೆಟ್ ವಿತರಣೆಗೆ ಸಿಬ್ಬಂದಿ, ಪರಿಕರಗಳ ವ್ಯವಸ್ಥೆ ಮತ್ತು ಇತರ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಗುತ್ತಿಗೆ ಪಡೆಯಲು ಏಜೆಂಟರು ಹಿಂದೆ ಸರಿಯುತ್ತಿದ್ದಾರೆ.
ಸ್ಥಗಿತಗೊಂಡಿರುವ ನಿಲ್ದಾಣ
ಬೆಂಗಳೂರು ಭಾಗದ ದೊಡ್ಡಜಾಲ ಮತ್ತು ಆವತಿ,
ಚಿಕ್ಕಬಳ್ಳಾಪುರದ ಗಿಡ್ನಹಳ್ಳಿ,
ಕೋಲಾರದ ಹುಡುಕುಲ ಮತ್ತು ಜನ್ನಗಟ್ಟಾ,
ಆಂಧ್ರದ ಕೊತ್ತಚೆರವು
ಸ್ಥಳಿಯರ ಆಕ್ರೋಶ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಾಜ್ಯ ರಾಜಧಾನಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರಕ್ಕೆ ರೈಲ್ವೆ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಒತ್ತಡ ಕೇಳಿ ಬರುತ್ತಿದೆ. ಪ್ರಸ್ತುತ ಕೋಲಾರ ಮತ್ತು ಬೆಂಗಳೂರು ಮಾರ್ಗವಾಗಿ ಎರಡು ರೈಲುಗಳು ಈ ಭಾಗದ ಮೂಲಕ ಬೆಳಗ್ಗೆ ಮತ್ತು ರಾತ್ರಿ ಸಂಚರಿಸುತ್ತಿವೆ. ಇದರ ನಡುವೆ ದೇವನಹಳ್ಳಿಯ ವಿಮಾನ ನಿಲ್ದಾಣದವರೆಗೂ ವಿಶೇಷ ರೈಲುಗಳ ಸಂಚಾರವನ್ನು ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದರ ಬದಲಿಗೆ ಟಿಕೆಟ್ ದರ ಹೆಚ್ಚಳ, ನಿಲ್ದಾಣಗಳ ಬಂದ್ ಸೇರಿದಂತೆ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಯಂ ಸಿಬ್ಬಂದಿ ಇಲ್ಲ
ದುಬಾರಿ ನಿರ್ವಹಣೆ ವೆಚ್ಚ ಮತ್ತು ಕಡಿಮೆ ಆದಾಯದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಕಾಯಂ ಇಲ್ಲವೇ ಗುತ್ತಿಗೆ ಸಿಬ್ಬಂದಿ ನೇಮಿಸಲು ಮುಂದಾಗುತ್ತಿಲ್ಲ. ಕಮಿಷನ್ ಲೆಕ್ಕದಲ್ಲಿ ಏಜೆಂಟರನ್ನು ನೇಮಿಸುತ್ತಿದೆ. ಇನ್ನು ಪ್ರಯಾಣಿಕರು ದೊಡ್ಡ ದೊಡ್ಡ ನಿಲ್ದಾಣಗಳಲ್ಲಿ ಟಿಕೆಟ್ ಇಲ್ಲವೇ ಮಾಸಿಕ ಪಾಸ್ ಖರೀದಿಸುತ್ತಿದ್ದಾರೆ. ಚಿಕ್ಕ ನಿಲ್ದಾಣಗಳಲ್ಲಿ ದಿನಕ್ಕೆ 10 ಟಿಕೆಟ್ ಖರೀದಿಯಾದರೆ ಹೆಚ್ಚು. ಇದಕ್ಕೆ ನಿಲ್ದಾಣಗಳು ಗ್ರಾಮದಿಂದ ನಾಲ್ಕೆದು ಕಿ.ಮೀ ದೂರದಲ್ಲಿದ್ದು, ಅಲ್ಲಿಗೆ ಖಾಸಗಿ ವಾಹನದಲ್ಲಿ ತೆರಳಿ, ಬಳಿಕ ಕಡಿಮೆ ಅಂತರದ ಊರಿಗೆ ರೈಲಿನಲ್ಲಿ ಸಂಚರಿಸುವುದು ತ್ರಾಸದಾಯಕ ಎಂಬ ಭಾವನೆ ಹಲವರಲ್ಲಿದೆ. ಮತ್ತೊಂದೆಡೆ ಆ ಭಾಗದಿಂದ ಪ್ರತಿನಿತ್ಯ ಪ್ರಯಾಣಿಸುವವರಿಗೆ ಮಾತ್ರ ರೈಲ್ವೆ ಅನುಕೂಲವಾಗಿದ್ದು, ಇದೀಗ ಇವರನ್ನು ನಿಲ್ದಾಣ ಮುಚ್ಚುವ ಮೂಲಕ ಇತರ ವಾಹನಗಳನ್ನು ನೆಚ್ಚಿಕೊಳ್ಳುವಂತೆ ಪರೋಕ್ಷವಾಗಿ ಪೋತ್ಸಾಹಿಸಲಾಗುತ್ತಿದೆ.
ಅವಿಭಜಿತ ಜಿಲ್ಲೆ; ಜನರಿಗೆ ತೊಂದರೆ
ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರದ ನಡುವೆ ನೂರಾರು ಪ್ರಯಾಣಿಕರು ರೈಲ್ವೆ ಸೇವೆ ನೆಚ್ಚಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ರೈಲಿನಲ್ಲಿ ಕೇವಲ 20 ರೂ. ಆದರೆ, ಬಸ್ಸಿನಲ್ಲಿ ಕನಿಷ್ಠ 60ರಿಂದ 68 ರೂಪಾಯಿ ನೀಡಬೇಕು. ಇನ್ನು ಕುಟುಂಬ ಸಮೇತ ರೈಲಿನಲ್ಲಿ ಸಂಚರಿಸಿದಾಗ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಇದಕ್ಕೆ ಈ ಭಾಗದ ಸರ್ಕಾರಿ, ಖಾಸಗಿ ಕಂಪನಿ ಉದ್ಯೋಗಿಗಳು, ಕಾರ್ಮಿಕರು, ಗಾಮೆಂರ್ಟ್ಸ್ ನೌಕರರು, ವಿದ್ಯಾರ್ಥಿಗಳು ಸೇರಿ ನೂರಾರು ಮಂದಿ ಯಲಹಂಕ, ಬೆಂಗಳೂರು, ಶಿಡ್ಲಟ್ಟ, ಚಿಂತಾಮಣಿ ಮಾರ್ಗವಾಗಿ ಸಂಚರಿಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳ ಮೂಲಕ ಗುಣಮಟ್ಟದ ಸೇವೆ ನೀಡಬೇಕು.
ಕಾಯಂ ಸಿಬ್ಬಂದಿ ಇಲ್ಲ: ದುಬಾರಿ ನಿರ್ವಹಣೆ ವೆಚ್ಚ ಮತ್ತು ಕಡಿಮೆ ಆದಾಯದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಕಾಯಂ ಇಲ್ಲವೇ ಗುತ್ತಿಗೆ ಸಿಬ್ಬಂದಿ ನೇಮಿಸಲು ಮುಂದಾಗುತ್ತಿಲ್ಲ. ಕಮಿಷನ್ ಲೆಕ್ಕದಲ್ಲಿ ಏಜೆಂಟರನ್ನು ನೇಮಿಸುತ್ತಿದೆ. ಇನ್ನು ಪ್ರಯಾಣಿಕರು ದೊಡ್ಡ ದೊಡ್ಡ ನಿಲ್ದಾಣಗಳಲ್ಲಿ ಟಿಕೆಟ್ ಇಲ್ಲವೇ ಮಾಸಿಕ ಪಾಸ್ ಖರೀದಿಸುತ್ತಿದ್ದಾರೆ. ಚಿಕ್ಕ ನಿಲ್ದಾಣಗಳಲ್ಲಿ ದಿನಕ್ಕೆ 10 ಟಿಕೆಟ್ ಖರೀದಿಯಾದರೆ ಹೆಚ್ಚು. ಇದಕ್ಕೆ ನಿಲ್ದಾಣಗಳು ಗ್ರಾಮದಿಂದ ನಾಲ್ಕೆದು ಕಿ.ಮೀ ದೂರದಲ್ಲಿದ್ದು, ಅಲ್ಲಿಗೆ ಖಾಸಗಿ ವಾಹನದಲ್ಲಿ ತೆರಳಿ, ಬಳಿಕ ಕಡಿಮೆ ಅಂತರದ ಊರಿಗೆ ರೈಲಿನಲ್ಲಿ ಸಂಚರಿಸುವುದು ತ್ರಾಸದಾಯಕ ಎಂಬ ಭಾವನೆ ಹಲವರಲ್ಲಿದೆ. ಮತ್ತೊಂದೆಡೆ ಆ ಭಾಗದಿಂದ ಪ್ರತಿನಿತ್ಯ ಪ್ರಯಾಣಿಸುವವರಿಗೆ ಮಾತ್ರ ರೈಲ್ವೆ ಅನುಕೂಲವಾಗಿದ್ದು, ಇದೀಗ ಇವರನ್ನು ನಿಲ್ದಾಣ ಮುಚ್ಚುವ ಮೂಲಕ ಇತರ ವಾಹನಗಳನ್ನು ನೆಚ್ಚಿಕೊಳ್ಳುವಂತೆ ಪರೋಕ್ಷವಾಗಿ ಪೋತ್ಸಾಹಿಸಲಾಗುತ್ತಿದೆ.
ನೀರಿಗೆ ಅನುಗುಣವಾಗಿ ಬಾರದ ಪ್ರಯಾಣಿಕರು ಮತ್ತು ಆದಾಯದಿಂದ ನಿಲ್ದಾಣ ನಿರ್ವಹಣೆ ಕಷ್ಟವಾಗುತ್ತದೆ. ಇದಕ್ಕೆ ಇಂತಹ ಕ್ರಮ ಕೈಗೊಳ್ಳದೆ ಬೇರೆ ವಿಧಿ ಇಲ್ಲ.
ಹೆಸರು ಹೇಳಲು ಇಚ್ಛಿಸದ ಅಧಿಕಾರಿ, ರೈಲ್ವೆ ಇಲಾಖೆ
ಅವೈಜ್ಞಾನಿಕವಾಗಿ ದಿಢೀರ್ ನಿರ್ಧಾರ ಕೈಗೊಳ್ಳುವಲ್ಲಿ ಅಧಿಕಾರಿಗಳು ಬದ್ಧತೆ ತೋರುತ್ತಿದ್ದಾರೆ. ಮೊದಲು ಸ್ಥಳಿಯವಾಗಿ ಅಭಿಪ್ರಾಯ ಸಂಗ್ರಹ, ಸಾಧಕ ಬಾಧಕಗಳ
ಚರ್ಚೆಯ ವಿವೇಚನೆ ಇಲ್ಲ. ಪ್ರಯಾಣಿಕರ ಸೇವೆಗಿಂತಲೂ ಲಾಭವೇ ಮುಖ್ಯವಾಗಿದೆ.
ರಮೇಶ್, ರೈಲ್ವೆ ಪ್ರಯಾಣಿಕ