ಕರ್ನಾಟಕ ಬಂದ್; ಶೂಟಿಂಗ್ ನಿಲ್ಲಿಸಿ, ಪ್ರತಿಭಟನೆಯಲ್ಲಿ ಭಾಗಿಯಾದ ನಟ 'ಒರಟ' ಪ್ರಶಾಂತ್​

Untitled design - 2023-09-29T104703.463
Published on

ಬಾಗಲಕೋಟೆ: ಕಾವೇರಿ ವಿಚಾರವಾಗಿ ನಡೆಯುತ್ತಿರುವ ಕರ್ನಾಟಕ ಬಂದ್​ಗೆ 'ಒರಟ' ಚಿತ್ರದ ನಟ ಪ್ರಶಾಂತ್​ ಮತ್ತು 'ದೇಸಾಯಿ' ಚಿತ್ರತಂಡ ಬೆಂಬಲ ವ್ಯಕ್ತಪಡಿಸಿದೆ.

ಬಾಗಲಕೋಟೆಯಲ್ಲಿ ಕನ್ನಡ ಪರ ಸಂಘಟನಗೆಳು ನಡೆಸುತ್ತಿದ್ದ ಪ್ರತಿಭಟನೆಗೆ ಸಾಥ್​ ನೀಡಿದ 'ದೇಸಾಯಿ' ಚಿತ್ರತಂಡ ಬಂದ್​ಗೆ ಅಭೂತಪೂರ್ವ ಬೆಂಬಲ ನೀಡಿದೆ. ಚಿತ್ರದ ಶೂಟಿಂಗ್ ನಿಲ್ಲಿಸಿ, ಪ್ರತಿಭಟನೆಯಲ್ಲಿ ಭಾಗಿಯಾಗುವ ಮುಖೇನ ಕಾರ್ಯಕರ್ತರನ್ನು ಹುರಿದುಂಬಿಸಿದೆ.

ಬಾಗಲಕೋಟೆಯ ಬಸವೇಶ್ವರ ವೃತ್ತದ ಬಳಿ ನಟ 'ಒರಟ' ಪ್ರಶಾಂತ್, ಪ್ರವೀಣ ಕುಮಾರ್, ನಟಿ ಸೃಷ್ಟಿ, ಆನಂದ ರಂಗ್ರೇಜ, ನಿರ್ಮಾಪಕ ಮಹಾಂತೇಶ್ ಚೊಳಚಗುಡ್ಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿ, ಸಾಥ್ ನೀಡಿದರು.

"ಕಾವೇರಿ ಹೋರಾಟ ಜನಸಾಮಾನ್ಯರ ಹೋರಾಟವಾಗಿದೆ. ನಿಜವಾಗಿ ಹೋರಾಟ ಮಾಡಬೇಕಾದವರು ನಾವು ಗೆಲ್ಲಿಸಿ, ಕಳುಹಿಸಿದ ಜನರು. ಆದ್ರೆ, ಅವರು ಹೋರಾಟ ಮಾಡದೇ ಇರುವುದರಿಂದ ನಾವು ಹೋರಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಹೋರಾಟ ಎಷ್ಟು ಅಂತ ಮಾಡೋದು, ಇದಕ್ಕೆ ಶಾಶ್ವತ ಪರಿಹಾರ ಬೇಕಲ್ವಾ? ಎರಡು ರಾಜ್ಯ ಸರ್ಕಾರ, ಕೇಂದ್ರದ ಬಳಿ ಈ ಸಮಸ್ಯೆ ಬಗ್ಗೆ ಮಾತನಾಡಬೇಕು" ಎಂದು ಚಿತ್ರತಂಡ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net