ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಮುಂಗುಸಿ ಎಲ್ಲಿದೆ ಎಂದು ಹೇಳಬಲ್ಲಿರಾ..?optical illusion

optical illusion
Published on

optical illusion :  ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೃಷ್ಟಿಭ್ರಮ ಎಂದರೇನು? ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಭ್ರಮೆಯ ಒಗಟುಗಳು ವೈರಲ್ ಆಗುತ್ತಿವೆ. 'ಈ ಫೋಟೋದಲ್ಲಿ ಯಾವ ವಸ್ತುಗಳು ಅಡಗಿವೆ?' 'ಈ ಫೋಟೋದಲ್ಲಿ ಹಾವು ಎಲ್ಲಿದೆ ಎಂದು ಹುಡುಕಿ', 'ಈ ಫೋಟೋದಲ್ಲಿ ಎಷ್ಟು ಪ್ರಾಣಿಗಳಿವೆ' ಇತ್ಯಾದಿ ಪ್ರಶ್ನೆಗಳನ್ನು ನಿಮಗೆ ಕೇಳಲಾಗುತ್ತದೆ.ನಿಮ್ಮ ವೀಕ್ಷಣಾ ಕೌಶಲ್ಯಗಳು ಹೇಗಿವೆ ಮತ್ತು ನಿಮ್ಮ ಕಣ್ಣಿನ ಗಮನ ಹೇಗಿದೆ ಎಂಬುದನ್ನು ಕಂಡುಹಿಡಿಯಲು ಈ ಒಗಟುಗಳು ಉಪಯುಕ್ತವಾಗಿವೆ. ಇಂತಹ ಕೆಲವು ಒಗಟುಗಳು ಮೆದುಳನ್ನು ಚುರುಕುಗೊಳಿಸುತ್ತವೆ. ಕೆ

ಮೇಲಿನ ಫೋಟೋವನ್ನು ನೋಡಿ. ಅದರಲ್ಲಿ ಒಂದು ಮುಂಗುಸಿ   ಇದೆ. ನೀವು ಅದು ಎಲ್ಲಿದೆ ಎಂದು  ಹೇಳಬೇಕು. ಅದು ಅಷ್ಟು ಸುಲಭವಲ್ಲ. ಅಲ್ಲಿನ ಒಣಗಿರುವ ಕಟ್ಟಿಗೆಗಳ ಮಧ್ಯೆ  ಅದು ಅಡಗಿಕೊಂಡಿದೆ.  ಈ ಮುಂಗುಸಿಯನ್ನು ಪತ್ತೆ ಮಾಡಲು ನಿಮಗೆ ನಾವು 1 ನಿಮಿಷ ಸಮಯ ನೀಡುತ್ತಿದ್ದೇವೆ.

ಈ ಒಗಟು ನಿಮ್ಮನ್ನು ಗೊಂದಲಗೊಳಿಸುತ್ತದೆ. ಈ ಒಗಟನ್ನು ಬಿಡಿಸುವಲ್ಲಿ ಅನೇಕ ಜನರು ವಿಫಲರಾಗಿದ್ದಾರೆ. ಎಷ್ಟೇ ಹೊತ್ತು ಹುಡುಕಿದರೂ ಸಿಗದಿದ್ದರೆ, ಉತ್ತರಕ್ಕಾಗಿ ಕೆಳಗಿನ ಫೋಟೋ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net