ನೀವು ಬುದ್ಧಿವಂತರಾಗಿದ್ರೆ ಈ ಫೋಟೋದಲ್ಲಿರುವ ಚಿರತೆಯನ್ನು ಪತ್ತೆ ಮಾಡಿ

optical illusion can you spot the snow leopard
Published on

ಬೆಂಗಳೂರು: ಇತ್ತೀಚೆಗೆ ಅನೇಕರಿಗೆ ಕೆಲಸದ ಒತ್ತಡ ಹೆಚ್ಚಿದೆ. ಮತ್ತು ಆ ಒತ್ತಡದಿಂದ ಹೊರಬರಲು ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯುತ್ತಾರೆ. ಅಂತರ್ಜಾಲದಲ್ಲಿ ಫೋಟೋ ಒಗಟುಗಳನ್ನು ಇಷ್ಟಪಡುವ ಅನೇಕ ಜನರಿದ್ದಾರೆ. ಕೆಲವರು ಈ ಫೋಟೋ ಒಗಟುಗಳನ್ನು ಬಿಡಿಸಲು ಉತ್ಸುಕರಾಗಿದ್ದಾರೆ.

ಆಪ್ಟಿಕಲ್ ಭ್ರಮೆ ಎಂದರೇನು?: ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ. ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಆಪ್ಟಿಕಲ್ ಭ್ರಮೆಗಳು ನಿಮ್ಮ ಕಣ್ಣು, ಮೆದುಳಿಗೆ ಕೊಂಚ ಕೆಲಸ ನೀಡುತ್ತವೆ. ಇದರಿಂದ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಕೆಲವು ಜನರು ಒಗಟು ಪರಿಹರಿಸುವವರೆಗೆ ಬಿಡುವುದಿಲ್ಲ. ನಾವು ನಿಮಗೆ ಒಂದು ಸವಾಲು ನೀಡುತ್ತಿದ್ದೇವೆ.

ಈ ಮೇಲಿನ ಫೋಟೋ ನೋಡಿದ್ದೀರಾ? ಈ ಕಾಡಿನಂತಹ ಪ್ರದೇಶದಲ್ಲಿ ನೀವು ಹೆಚ್ಚಾಗಿ ಬಂಡೆಗಳನ್ನು ನೋಡುತ್ತಿದ್ದೀರಿ ಅಲ್ಲವೇ.. ಜೊತೆಗೆ ಎರಡು ಜಿಂಕೆಗಳೂ ಇವೆ. ಅವುಗಳನ್ನು ಬೇಟೆಯಾಡಲು ಚಿರತೆಯೊಂದು ಅಡಗಿ ಕುಳಿತಿದೆ. ಈ ಚಿರತೆಯನ್ನು ಹುಡುಕುವುದೆ ನಿಮ್ಮ ಮುಂದೆ ಇರುವ ಸವಾಲಾಗಿದೆ.

ನೋಡಿದ ಕೆಲವೇ ಸೆಕೆಂಡುಗಳಲ್ಲಿ ನೀವು ಚಿರತೆಯನ್ನು ಗುರುತಿಸಿದರೆ, ನೀವು ವಿಜೇತರಾಗುತ್ತೀರಿ. ಬಹಳ ಹೊತ್ತು ಹುಡುಕಿದರೂ ಚಿರತೆ ಸಿಗದೇ ಇದ್ದರೆ, ನಾವೆ ನಿಮಗೆ ಉತ್ತರವನ್ನು ತಿಳಿಸುತ್ತೇವೆ. ಉತ್ತರಕ್ಕಾಗಿ ಈ ಕೆಳಗಿನ ಫೋಟೋವನ್ನು ನೋಡಿ....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net