ಕಣ್ಣಿಗೊಂದು ಸವಾಲು: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು 10 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ? Optical Illusion

Optical Illusion 
Published on

Optical Illusion : ಆಪ್ಟಿಕಲ್ ಭ್ರಮೆಗಳ ಜಗತ್ತು ಯಾವಾಗಲೂ ಜನರನ್ನು ಬೆರಗುಗೊಳಿಸುತ್ತದೆ. ಈ ಚಿತ್ರಗಳು ನಮ್ಮ ಕಣ್ಣು, ಮನಸ್ಸನ್ನು ಮೋಸಗೊಳಿಸುವುದಲ್ಲದೆ, ಸವಾಲು ಹಾಕುತ್ತವೆ. ಇತ್ತೀಚೆಗೆ, ಇದೇ ರೀತಿಯ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ದೃಷ್ಟಿಭ್ರಮ ಎಂದರೇನು?

Optical Illusion 

ಈ ಚಿತ್ರದಲ್ಲಿ, ಒಣ ಎಲೆಗಳ ರಾಶಿಯಲ್ಲಿ ಅಡಗಿರುವ ನಾಯಿಯನ್ನು ನೀವು 10 ಸೆಕೆಂಡುಗಳಲ್ಲಿ ಕಂಡುಹಿಡಿಯಬೇಕು. ಎಲೆಗಳು ಕಂದು ಮತ್ತು ಚಿನ್ನದ ಬಣ್ಣದ್ದಾಗಿದ್ದು, ನಾಯಿಯೂ ಇದೇ ರೀತಿಯ ಬಣ್ಣವನ್ನು ಹೊಂದಿದೆ. ಮೊದಲ ನೋಟಕ್ಕೆ ಅದು ಕೇವಲ ಎಲೆಗಳ ರಾಶಿಯಂತೆ ಕಾಣುತ್ತದೆ. ಆದರೆ ನೀವು ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿದರೆ, ಈ ಎಲೆಗಳ ನಡುವೆ ನಾಯಿ ಅಡಗಿಕೊಂಡಿರುವುದು ನಿಮಗೆ ತಿಳಿಯುತ್ತದೆ.

ನಾಯಿಯ ಬಣ್ಣ ಮತ್ತು ಎಲೆಗಳ ವಿನ್ಯಾಸವು ತುಂಬಾ ಹೋಲುವುದರಿಂದ ಕಣ್ಣುಗಳು ಹೆಚ್ಚಾಗಿ ಮೋಸ ಹೋಗುತ್ತವೆ. ನೀವು ಈ ಸವಾಲನ್ನು ಪೂರ್ಣಗೊಳಿಸಲು ಬಯಸಿದರೆ, ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಎಲೆಗಳ ನಡುವಿನ ಪ್ರಾಣಿಯ ಆಕಾರದ ಮೇಲೆ ಕೇಂದ್ರೀಕರಿಸಿ. ಫೋಟೋದ ಎಡಭಾಗದಲ್ಲಿ, ನಾಯಿ ರಾಶಿಯ ಮಧ್ಯದಲ್ಲಿ ಅಡಗಿಕೊಂಡಿದೆ.

ನೀವು ಇನ್ನೂ ಆ ನಾಯಿಯನ್ನು ನೋಡದಿದ್ದರೆ, ಪರವಾಗಿಲ್ಲ. ನಾವು ಕೆಳಗೆ ಒಂದು ಚಿತ್ರವನ್ನು ಲಗತ್ತಿಸಿದ್ದೇವೆ. ಇದರಲ್ಲಿ ನಾಯಿಯ ಮೇಲೆ ಕೆಂಪು ಗುರುತು ಮಾಡಲಾಗಿದೆ.

Optical Illusion
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net