ಈ ಫೋಟೋದಲ್ಲಿರುವ ಬೆಕ್ಕನ್ನು 6 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ? Optical Illusion​

Optical Illusion
Published on

Optical Illusion​: ನೀವು ಗಮನಿಸಿದ್ದೀರೋ ಇಲ್ಲವೋ, ಇತ್ತೀಚೆಗೆ ಒಗಟುಗಳು ಕೂಡ ವೈರಲ್ ಆಗುತ್ತಿವೆ. ಇದರರ್ಥ ಕೇವಲ ಪದ ಒಗಟುಗಳು ನಿಮ್ಮ ಭಾಷೆಯ ಪಾಂಡಿತ್ಯವನ್ನು ತೋರಿಸುವುದಿಲ್ಲ. ನಿಮ್ಮ ವೀಕ್ಷಣಾ ಕೌಶಲ್ಯ, ನಿಮ್ಮ ಜ್ಞಾನ, ಕಣ್ಣಿನ ಗಮನ ಮತ್ತು ಬುದ್ಧಿವಂತಿಕೆಯನ್ನು ತೋರಿಸುವ ಇತರ ಒಗಟುಗಳು ಸಹ ಟ್ರೆಂಡಿಂಗ್ ಆಗಿವೆ.

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ದೃಷ್ಟಿಭ್ರಮ ಎಂದರೇನು?

ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

ಮೇಲಿನ ಫೋಟೋವನ್ನು ಚೆನ್ನಾಗಿ ನೋಡಿ.  ಮರದ ಕಾಂಡದಂತೆ ಕಾಣುತ್ತದೆ. ಅಲ್ಲಿ ಒಂದು ಬೆಕ್ಕು ಕೂಡ ಇದೆ. ಅದು ಎಲ್ಲಿದೆ ಎಂಬುದನ್ನು ನೀವು ಗ್ರಹಿಸಬೇಕು. ಇನ್ನೊಂದು ವಿಷಯವೆಂದರೆ... ಇದು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುವುದಿಲ್ಲ. ನೀವು ಅದನ್ನು ಕೇವಲ 6 ಸೆಕೆಂಡುಗಳಲ್ಲಿ ಪತ್ತೆ ಮಾಡಬೇಕು. ಆಗ ಮಾತ್ರ ನಿಮ್ಮ ಗಮನ ಎಷ್ಟು ಕೇಂದ್ರೀಕೃತವಾಗಿದೆ ಎಂದು ನಿಮಗೆ ತಿಳಿಯುತ್ತದೆ.  ಅಷ್ಟು ಕಡಿಮೆ ಸಮಯದಲ್ಲಿ ಫೋಟೋದಲ್ಲಿ ಅಡಗಿರುವ ಬೆಕ್ಕನ್ನು ನೀವು ಹುಡುಕಬಲ್ಲಿರಾ? ನೀವು ಗಮನ ಹರಿಸಿದರೆ, ನೀವು ಖಂಡಿತವಾಗಿಯೂ ಅದನ್ನು ಕಂಡುಕೊಳ್ಳುವಿರಿ.

ನೀವು ಫೋಟೋದಲ್ಲಿರುವ  ಬೆಕ್ಕನ್ನು ಪತ್ತೆಹಚ್ಚಿದ್ದರೆ, ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಬೆಕ್ಕನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net