

ಬೆಂಗಳೂರು: ತಪ್ಪುಗಳನ್ನು ಎತ್ತಿ ತೋರಿಸುವವರ ವಿರುದ್ಧ ರಾಜ್ಯ ಸರ್ಕಾರ ದಮನಕಾರಿ ನೀತಿ ಅನುಸರಿಸಿದೆ. ಪಕ್ಷದ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರ ಮೇಲೆ ಪೊಲೀಸ್ ಬಲ ಬಳಸಿ ದೌರ್ಜನ್ಯ ನಡೆಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಪಕ್ಷದ ನಿಯೋಗವು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ರಿಗೆ ಬುಧವಾರ ಭೇಟಿ ಮಾಡಿ ಚರ್ಚಿಸಿ ಈ ಕುರಿತು ಮನವಿ ಸಲ್ಲಿಸಿತು. ಪೊಲೀಸರು ತಮ್ಮ ಕರ್ತವ್ಯ ಹೊರತಾಗಿ ೆನ್ ಮಾಡಿ ಬೆದರಿಕೆ, ಅನಗತ್ಯವಾಗಿ ಕೇಸ್ ದಾಖಲಿಸುವುದನ್ನು ತಪ್ಪಿಸಬೇಕು ಎಂದು ಕೋರಿತು.
ನಿಯೋಗದ ನೇತೃತ್ವವಹಿಸಿದ್ದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಪಕ್ಷದ ಕಾರ್ಯಕರ್ತರ ವಿರುದ್ಧ ಕೇಸು ದಾಖಲು ಹಾಗೂ ಮನೆಗೆ ಹೋಗಿ ಅವರನ್ನು ಕರೆತಂದು ಮೂರ‌್ನಾಲ್ಕು ತಾಸು ಕೆಲವೊಮ್ಮೆ ಒಂದೆರಡು ದಿನ ಎ್ಐಆರ್ ಹಾಕದೆ ಠಾಣೆಯಲ್ಲಿ ಕುಳಿತಿರುವಂತೆ ಮಾಡಲಾಗಿದೆ.
ಏನೇ ಇದ್ದರೂ ಪಕ್ಷಕ್ಕೆ ನೋಟಿಸ್ ಕೊಡಲು ಕೇಳಿದ್ದೇವೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಡಿಜಿಪಿ ಡಾ.ಅಲೋಕ್ ಮೋಹನ್ ಭರವಸೆ ನೀಡಿದ್ದಾರೆ. ಅಲ್ಲದೆ, ಮಾಧ್ಯಮದವರ ಮೇಲೂ ಕೇಸ್ ಹಾಕಿ ಬೆದರಿಸಬಾರದು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್ ಸಿದ್ದರಾಜು, ಕಾರ್ಯದರ್ಶಿ ಸಿದ್ದರಾಜು, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್, ಯೋಗೇಂದ್ರ ಹೂಡಘಟ್ಟ ಇನ್ನಿತರರು ಇದ್ದರು.