

ನವದೆಹಲಿ: ದೆಹಲಿ ಮತ್ತು ಬಿಹಾರದ ಎಲ್ಲಾ ನಾಯಕರು ಜಾಮೀನಿನ ಮೇಲೆ ಬಿಡುಗಡೆಯಾಗಿರುವುದರಿಂದ ವಿರೋಧ ಪಕ್ಷಗಳ ಮೈತ್ರಿಕೂಟವು ಘಟಬಂಧನ್ ಅಲ್ಲ ಬದಲಾಗಿ ಲಠ್ ಬಂಧನ್ (ಅಪರಾಧಿಗಳ ಮೈತ್ರಿ) ಎಂದು ಗುರುವಾರ (ಅ.23) ಪ್ರಧಾನಿ ನರೇಂದ್ರ ಮೋದಿ(PM Modi) ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದ ಮೂಲಕ ಬಿಹಾರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಿಹಾರದ ಜನರು ಲಠಬಂಧನ್ ಎಂದು ಕರೆಯುವ ಘಟಬಂಧನ್ ಎಂದು ಕರೆದುಕೊಳ್ಳುವವರಿಗೆ ಲಾಠಿ ಬಳಸುವುದು ಮತ್ತು ಹೋರಾಡುವುದು ಹೇಗೆ ಎಂದು ತಿಳಿದಿದೆ. ಅಲ್ಲದೆ, ಲಠಬಂಧನ್ಗೆ ವಿಪಕ್ಷಗಳ ಸ್ವಂತ ಹಿತಾಸಕ್ತಿಯೇ ಮುಖ್ಯವಾಗಿದೆ.
ವಿಪಕ್ಷಗಳ ಮೈತ್ರಿಕೂಟವು ಬಿಹಾರದ ಯುವಕರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇವರು ದಶಕಗಳಿಂದ, ದೇಶದ ಮತ್ತು ಬಿಹಾರದ ಯುವಕರು ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯಿಂದ ಬಳಲುತ್ತಿದ್ದರು. ವಿಪಕ್ಷಗಳು ಮಾವೋವಾದಿ ಭಯೋತ್ಪಾದನೆಯ ಸಹಾಯದಿಂದ ಚುನಾವಣೆಗಳನ್ನು ಗೆಲ್ಲುತ್ತಲೇ ಇದ್ದರು. ಅಲ್ಲದೆ, ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆ ಬಿಹಾರದ ನಾಶದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಈ ಮಾವೋವಾದಿ ಭಯೋತ್ಪಾದನೆಯು ಶಾಲೆಗಳು, ಕಾಲೇಜುಗಳು ಅಥವಾ ಆಸ್ಪತ್ರೆಗಳನ್ನು ತೆರೆಯಲು ಅವಕಾಶ ನೀಡಲಿಲ್ಲ, ಬದಲಿಗೆ ಈಗಾಗಲೇ ನಿರ್ಮಿಸಲಾದ ಕೈಗಾರಿಕೆಗಳನ್ನು ನಾಶಪಡಿಸಿದವು ಎಂದು ವಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನೆಡೆಸಿದ್ದಾರೆ.
ವಿಪಕ್ಷಗಳು ಕೈಗಾರಿಕೆಗಳನ್ನು ಪ್ರವೇಶಿಸಲು ಬಿಡಲಿಲ್ಲ. ಬಿಹಾರವನ್ನು ಇದರಿಂದ ಹೊರತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ ನಾವು 2014 ರಿಂದ ತುಂಬಾ ಶ್ರಮಿಸುತ್ತಿದ್ದೇವೆ. ಎನ್ಡಿಎ ಬಿಹಾರವನ್ನು ಕಾಡುರಾಜ್ಯದ ಕತ್ತಲೆಯಿಂದ ಹೊರತಂದಿದೆ ಮತ್ತು ಅಭಿವೃದ್ಧಿಯ ಹೊಸ ಬೆಳಕಿಗೆ ತಂದಿದೆ. ಇಂದು, ನಾವು ಬಿಹಾರದಲ್ಲಿ ನಕ್ಸಲಿಸಂ, ಮಾವೋವಾದ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವತ್ತ ವೇಗವಾಗಿ ಸಾಗುತ್ತಿದ್ದೇವೆ. ಭವಿಷ್ಯವನ್ನು ಸುರಕ್ಷಿತಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ”
ಮುಂದುವರೆದು ಮಾತನಾಡಿದ ಮೋದಿ, ಬಿಹಾರದ ಹೆಣ್ಣುಮಕ್ಕಳು ಎಲ್ಲೆಡೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಜಂಗಲ್ ರಾಜ್ ಸಮಯದಲ್ಲಿ, ಹಗರಣಗಳು ನಡೆದವು. ನಮ್ಮ ಆಡಳಿತವು ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ವಿಪಕ್ಷವು ಬಿಹಾರದ ಹೆಣ್ಣುಮಕ್ಕಳನ್ನು ನಾಲ್ಕು ಗೋಡೆಗಳ ಒಳಗೆ ಬಂಧಿಸಿದರು. ಆದ್ದರಿಂದ, ಇವರನ್ನು ಅಧಿಕಾರದಿಂದ ದೂರವಿಡುವುದು ಬಹಳ ಮುಖ್ಯವಾಗಿದೆ.
ಆಪರೇಷನ್ ಸಿಂಧೂರವನ್ನು ಸಹ ನಡೆಸಲಾಗಿದೆ. ದೇಶವು ನಕ್ಸಲಿಸಂನಿಂದ ಸ್ವಾತಂತ್ರ್ಯದತ್ತ ವೇಗವಾಗಿ ಮುನ್ನಡೆಯುತ್ತಿದೆ. ಆದ್ದರಿಂದ ಇದು ಮತದ ಶಕ್ತಿ, ಜಂಗಲ್ ರಾಜ್ ಅನ್ನು ತೆಗೆದುಹಾಕಿದ ನಂತರ, ಇಂದು, ಬಿಹಾರದ ಜನರು ಯಾವುದೇ ಸಂದರ್ಭದಲ್ಲೂ ಜಂಗಲ್ ರಾಜ್ ಮತ್ತೆ ಬರಲು ಬಿಡಲು ಬಯಸುವುದಿಲ್ಲ. ಆದ್ದರಿಂದ ಇದು ಬಿಹಾರದ ಪ್ರಜ್ಞಾಪೂರ್ವಕ ನಾಗರಿಕರ ಶಕ್ತಿ ಎಂದು ಮೋದಿ ಹೇಳಿದರು. (ಏಜೆನ್ಸೀಸ್)