ಫ್ಯಾನ್, ಪಠ್ಯಪುಸ್ತಕ ಸೇರಿ ಇನ್ನಷ್ಟು ವಸ್ತುಗಳ ಮಾರಾಟಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ

books april
Published on

ನವದೆಹಲಿ: ಕರೊನಾ ಲಾಕ್‌ಡೌನ್ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಿರುವ ಕೇಂದ್ರ ಗೃಹ ಸಚಿವಾಲಯ,

ಮತ್ತಷ್ಟು ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿ ಮಂಗಳವಾರ ರಾತ್ರಿ ಆದೇಶ ಹೊರಡಿಸಿದೆ.

ಅದರ ಪ್ರಕಾರ, ಶಾಲಾ-ಕಾಲೇಜು ಪಠ್ಯಪುಸ್ತಕದ ಅಂಗಡಿಗಳು, ಎಲೆಕ್ಟ್ರಿಕ್ ಫ್ಯಾನ್‌ಗಳನ್ನು ಮಾರುವ ಮಳಿಗೆಗಳು ಕಾರ್ಯ ನಿರ್ವಹಿಸಬಹುದು. ಕೆಲವು ಹೆಚ್ಚುವರಿ ಕೃಷಿ ಸಂಬಂಧಿ ವಸ್ತುಗಳೂ ಸಡಿಲಿಕೆಯಾದ ನಿಯಮಗಳ ಪಟ್ಟಿಯಲ್ಲಿ ಇವೆ. ಬಂದರುಗಳಲ್ಲಿನ ಚಟುವಟಿಕೆಗೂ ಈ ಸಡಿಲಿಕೆ ಅನ್ವಯವಾಗುತ್ತದೆ.

ಆದರೆ ಈ ಯಾವ ಸಡಿಲಿಕೆಯೂ ಕರೊನಾ ಹಾಟ್‌ಸ್ಪಾಟ್ ಅಥವಾ ಕಂಟೇನ್‌ಮೆಂಟ್ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಅಲ್ಲಿ ಮೇಲ್ಕಾಣಿಸಿದ ಈ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net