ಷೇರು ಪ್ರವೇಶ, ಇರಲಿ ಸಾವಕಾಶ!: ಆಕಾಶದಷ್ಟು ಅವಕಾಶ..

Harsha Shivamurthy
Published on

ಒಂದಷ್ಟು ಆತ್ಮವಿಶ್ವಾಸ, ಒಂದಷ್ಟು ಧೈರ್ಯ-ಹುಮ್ಮಸ್ಸು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ, ಹೊರಗಿನ ಆಗುಹೋಗುಗಳತ್ತ ಗಮನ ಇಡುವ ಮೂಲಕ, ಮೂಗಿನ ಮೇಲೆ ಬೆರಳಿಡುವಂಥ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ ನಾನಾ ಕ್ಷೇತ್ರಗಳ ಪ್ರಮುಖರು. ಆಲ್ ದಿ ಬೆಸ್ಟ್!

| ಹರ್ಷ ಶಿವಮೂರ್ತಿ ಅವೇಕ್ಷಾ ಸ್ಟಾಕ್ಸ್ ಸಂಸ್ಥಾಪಕ ಮತ್ತು ಸಿಇಒ

ಷೇರುಪೇಟೆ ವಹಿವಾಟು ನಡೆಸುವುದನ್ನೇ ಪೂರ್ಣಪ್ರಮಾಣದ ಉದ್ಯೋಗವಾಗಿ ತೆಗೆದುಕೊಳ್ಳಲು ಅವಕಾಶ ಇದೆ. ಆದರೆ ಅವಕಾಶದಷ್ಟೇ ಅಪಾಯವೂ ಇದೆ. ಯಾವುದೇ ಉದ್ಯಮವನ್ನು ಆರಂಭಿಸುವ ಮುನ್ನ ಒಂದಷ್ಟು ಪ್ರಾಥಮಿಕ ಅಧ್ಯಯನ ನಡೆಸಲೇಬೇಕು. ದಿಢೀರನೆ ದುಡ್ಡು ಮಾಡಲು ಹೋಗುವವರಿಗೆ ಇಲ್ಲಿ ಅವಕಾಶವಿಲ್ಲ. ಪ್ರಾರಂಭದಲ್ಲಿ ನೇರವಾಗಿ ಷೇರು ಮಾರುಕಟ್ಟೆಗೆ ಹೋಗುವ ಮೊದಲು ಆರು ತಿಂಗಳಾದರೂ ಬುಕ್ ಟ್ರೇಡಿಂಗ್ ಮಾಡಬೇಕು. ಎಲ್ಲ ಹಣವನ್ನೂ ಒಮ್ಮೆಲೇ ತೊಡಗಿಸುವ ಬದಲು ಹಂತಹಂತವಾಗಿ ಮುನ್ನಡೆಯಬೇಕು. ಹೆಡ್ಜಿಂಗ್- ಫ್ಯೂಚರ್ ಆಂಡ್ ಆಪ್ಷನ್ಸ್ ಅಭ್ಯಾಸ ಮಾಡಬೇಕು. ರಿಸ್ಕ್ ಇನ್ಶೂರೆನ್ಸ್ ಪಡೆಯುವುದು ಹೇಗೆಂದು ತಿಳಿಯಬೇಕು. ಬೇಸ್ ವ್ಯಾಲ್ಯೂ ಆಫ್ ಇಂಡೆಕ್ಸ್ ಅಧ್ಯಯನ ಮಾಡಬೇಕು. ಯಾವುದಾದರೂ ಕೆಲಸ ಮಾಡುತ್ತ ಷೇರು ವಹಿವಾಟು ಆರಂಭಿಸುವುದು ಒಳ್ಳೆಯದು. ಷೇರು ವ್ಯವಹಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಕುದುರೆಗೆ ಕಣ್ಣಿನ ಪಟ್ಟಿ ಹಾಕಿದಂತೆ ನಡೆದಾಗ ಮಾತ್ರ ಗೆಲ್ಲುತ್ತೇವೆ. ಭಾವನೆಗಳನ್ನು ನಿಯಂತ್ರಿಸಲಾಗದೆ, ಅವರಿವರ ಮಾತು ಕೇಳಿ, ದುರಾಸೆಗೆ ಬಿದ್ದು ಅನೇಕರು ನಷ್ಟ ಅನುಭವಿಸುತ್ತಾರೆ. ಅಂಥವರು ಷೇರು ಮಾರುಕಟ್ಟೆಯನ್ನು ಕುದುರೆ ಜೂಜಿಗೆ ಹೋಲಿಸಿ ತಪು್ಪ ಮಾಡುತ್ತಾರೆ. ಮುಖ್ಯವಾಗಿ ಆರ್ಥಿಕ ಸಾಕ್ಷರತೆಯನ್ನು ಪಡೆದುಕೊಂಡು ಹೆಜ್ಜೆ ಇಟ್ಟರೆ ಇದರಲ್ಲಿ ಸಫಲವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net