

ಲಾಸ್ ಏಜೆಂಲಿಸ್: ಆಸ್ಕರ್ ಪ್ರಶಸ್ತಿ 2024ರ ಸಮಾರಂಭವು ಇದೀಗ ಎಲ್ಲರ ಗಮನಸೆಳೆಯುತ್ತಿದ್ದು, ಯಾರ ಮುಡಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸೇರಲಿವೆ ಎಂಬ ನಿರೀಕ್ಷೆಗಳು ಸಿನಿಪ್ರೇಕ್ಷಕರಲ್ಲಿ ಹೆಚ್ಚಿದೆ. ಅವಾರ್ಡ್ಗಳ ಪಟ್ಟಿ ಅನಾವರಣಗೊಳ್ಳುತ್ತಿದ್ದಂತೆ ಇದೀಗ ಒಂದೇ ಒಂದು ಸಿನಿಮಾ ಬರೋಬ್ಬರಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಸಿನಿಪ್ರಿಯರಲ್ಲಿ ಭಾರೀ ಆಶ್ಚರ್ಯ ಮೂಡಿಸಿದೆ.
ಹೆಸರಾಂತ ನಿರ್ದೇಶಕ ಕ್ರಿಸ್ಟಫರ್ ನೋಲನ್ ನಿರ್ದೇಶನದ "ಓಪೆನ್ಹೈಮರ್" ಚಿತ್ರವು ಏಳು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಸೇರಿದಂತೆ ಇತರೆ ಅವಾರ್ಡ್ಗಳನ್ನು ಸ್ವೀಕರಿಸಿದೆ. ಬೆಸ್ಟ್ ಡೈರೆಕ್ಟರ್ ಅವಾರ್ಡ್ ಅನ್ನು ಕ್ರಿಸ್ಟೋಫರ್ ನೋಲನ್ ಪಡೆದರೆ, ಸಿಲಿಯನ್ ಮರ್ಫಿ 'ಅತ್ಯುತ್ತಮ ನಟ' ಪ್ರಶಸ್ತಿಯನ್ನು ಗೆದ್ದರು.
ಈ ಮೂಲಕ ಓಪೆನ್ಹೈಮರ್ 96ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಿನಿಮಾ ಸೇರಿ ಏಳು ಅವಾರ್ಡ್ಗಳನ್ನು ಗೆಲ್ಲುವ ಮೂಲಕ ಪ್ರೇಕ್ಷಕ ವರ್ಗದಿಂದ ಅಪಾರ ಮನ್ನಣೆ ಗಳಿಸಿದೆ. ಇನ್ನು ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಕೊಡಲು ವೇದಿಕೆಗೆ ಬೆತ್ತಲಾಗಿ ಬಂದ ಜಾನ್ ಸೀನಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದ್ದು, ಭಾರೀ ಟ್ರೋಲ್ ಕೂಡ ಆಗುತ್ತಿದ್ದಾರೆ,(ಏಜೆನ್ಸೀಸ್).