ದೇಶದ ಅತ್ಯಂತ ಜನಪ್ರಿಯ ನಾಯಕ ಯಾರು?; ಲೋಕಸಭೆ ಚುನಾವಣೆಗೂ ಮುನ್ನ ಸಮೀಕ್ಷೆ ಮೂಲಕ ಸಾರ್ವಜನಿಕರ ಅಭಿಪ್ರಾಯ ಬಹಿರಂಗ

modi
Published on

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಕೆಲವು ವಾಹಿನಿಗಳು ಹಾಗೂ ಸಂಸ್ಥೆಗಳು ಸಮೀಕ್ಷೆಯನ್ನು ನಡೆಸಿವೆ. ಇದರಲ್ಲಿ ದೇಶದ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಸಮೀಕ್ಷೆಯಲ್ಲಿ ಹಲವು ಆಘಾತಕಾರಿ ಅಂಕಿಅಂಶಗಳೂ ಹೊರಬಿದ್ದಿವೆ.

ಸಮೀಕ್ಷೆ ವೇಳೆ ಸಾರ್ವಜನಿಕರೊಂದಿಗೆ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ದೇಶದ ಅತ್ಯಂತ ಜನಪ್ರಿಯ ನಾಯಕ ಯಾರು ಎಂದು ಸಮೀಕ್ಷಾ ತಂಡ ಸಾರ್ವಜನಿಕರನ್ನು ಕೇಳಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಕೇಜ್ರಿವಾಲ್ ಮತ್ತು ಅಖಿಲೇಶ್ ಯಾದವ್ ಅವರ ಹೆಸರುಗಳನ್ನು ಆಯ್ಕೆಗಳಲ್ಲಿ ನೀಡಲಾಯಿತು. ಈ ಹೆಸರುಗಳನ್ನು ಕೇಳಿದ ನಂತರ ಸಾಮಾನ್ಯ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಜನರು ನರೇಂದ್ರ ಮೋದಿ ಅವರನ್ನು ದೇಶದ ಅತ್ಯಂತ ಜನಪ್ರಿಯ ನಾಯಕ ಎಂದು ಪರಿಗಣಿಸಿದ್ದಾರೆ. ಹೌದು, ಮೋದಿ ಅವರು ಜನಪ್ರಿಯ ನಾಯಕರ ಸಾಲಿನಲ್ಲಿದ್ದು, ಸಮೀಕ್ಷೆಯಲ್ಲಿ ಯಾರು ಎಷ್ಟು ಮತ ಪಡೆದಿದ್ದಾರೆ ಇಲ್ಲಿದೆ ನೋಡಿ ವಿವರ.

ದೇಶದ ಅತ್ಯಂತ ಜನಪ್ರಿಯ ನಾಯಕ ಯಾರು? 
ನರೇಂದ್ರ ಮೋದಿ- 68%
ರಾಹುಲ್ ಗಾಂಧಿ- 18%
ಅಖಿಲೇಶ್ ಯಾದವ್- 8%
ಅರವಿಂದ್ ಕೇಜ್ರಿವಾಲ್- 6%

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net