More

    ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ 12ನೇ ತರಗತಿ ಪಾಸ್ ಆದ ಮುಂಬೈ ಆಟೋ ಚಾಲಕ, ಹೇಗಿದೆ ಗೊತ್ತಾ ಇವರ ದಿನಚರಿ…

    ಮುಂಬೈ: ಷೇರು ಮಾರುಕಟ್ಟೆ ವಿಶೇಷ ಹೂಡಿಕೆಯ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ. ಈ ಅವಧಿಯಲ್ಲಿ ಕೆಲವರು ಲಾಭ ಗಳಿಸಿದರೆ, ಕೆಲವರು ನಷ್ಟವನ್ನೂ ಅನುಭವಿಸುತ್ತಾರೆ. ಈ ನಡುವೆ ಕನಸಿನ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈನಲ್ಲಿ ಆಟೋ ಚಾಲಕನೊಬ್ಬ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರ ಹೆಸರು ವಿಶಾಲ್ ಪೈಕ್ರಾವ್. ಕೆಲವು ವರದಿಗಳ ಪ್ರಕಾರ, ವಿಶಾಲ್ ಆಟೋ ಓಡಿಸುವುದರ ಜೊತೆಗೆ ಷೇರು ಮಾರುಕಟ್ಟೆಯಲ್ಲೂ ವ್ಯಾಪಾರ ಮಾಡುತ್ತಾರೆ.

    “ನಾನು ಬೆಳಗ್ಗೆ 8.30 ರ ಸುಮಾರಿಗೆ ಆಟೋದೊಂದಿಗೆ ಮನೆಯಿಂದ ಹೊರಡುತ್ತೇನೆ, ನಂತರ ಒಂದೆರೆಡು ಟ್ರಿಪ್​​​ ಹೊಡೆದು, ಟ್ರೇಡಿಂಗ್ ಸೆಟಪ್‌ನಲ್ಲಿ ಕುಳಿತುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ ವಿಶಾಲ್. ಅವರು ತಮ್ಮ ಆಟೋವನ್ನು ವ್ಯಾಪಾರಕ್ಕಾಗಿಯೇ ಇಟ್ಟುಕೊಂಡಿದ್ದಾರೆ. ಲ್ಯಾಪ್‌ಟಾಪ್ ಅನ್ನು ಸಹ ತನ್ನೊಂದಿಗೆ ಕೊಂಡೊಯ್ಯುತ್ತಾರೆ. ವ್ಯಾಪಾರ ಮಾಡುವಾಗ ಷೇರು ಮಾರುಕಟ್ಟೆಯ ಮೇಲೆ ಕಣ್ಣಿಡುತ್ತಾರೆ. ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸಿದ ನಂತರ ತಮ್ಮ ಆಟೋವನ್ನು ಶಾಂತ ಸ್ಥಳದಲ್ಲಿ ನಿಲ್ಲಿಸಿ, ನಂತರ ವ್ಯಾಪಾರವನ್ನು ಪ್ರಾರಂಭಿಸುತ್ತಾರೆ.

    ಆಟೋದಲ್ಲಿದೆ ಚಾರ್ಟ್ ಮಾದರಿ
    ವಿಶಾಲ್ ಅವರ ಆಟೋದಲ್ಲಿ ಸ್ಟಾಕ್ ಮಾರ್ಕೆಟ್ ಚಾರ್ಟ್ ಮಾದರಿಗಳನ್ನು ಅಳವಡಿಸಲಾಗಿದೆ. ವಹಿವಾಟಿಗೆ ಕಚೇರಿ ಬೇಕಿಲ್ಲ, ದೊಡ್ಡ ಚಾರ್ಟ್ ಸ್ಕ್ರೀನ್ ಬೇಕಿಲ್ಲ. ಎಲ್ಲಿ ಸಮಯ ಸಿಕ್ಕರೂ ಕುಳಿತು ವ್ಯಾಪಾರ ಮಾಡಬಹುದು. ನಿಮ್ಮ ಬಳಿ ಲ್ಯಾಪ್‌ಟಾಪ್ ಇದ್ದರೆ ಸಾಕು ಎನ್ನುತ್ತಾರೆ ವಿಶಾಲ್.
    ಅನೇಕ ಪ್ರಯಾಣಿಕರು ತಮ್ಮ ಆಟೋದಲ್ಲಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಚಾರ್ಟ್ ಅನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ನೀವು ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಾಗ ಆಟೋ ಏಕೆ ಓಡಿಸುತ್ತೀರಿ ಎಂದು ಹಲವರು ಕೇಳುತ್ತಾರೆ. ಆದರೆ ಇದು ನನ್ನ ಎರಡನೇ ಆದಾಯದ ಮೂಲ ಎಂದು ನಾನು ಅವರಿಗೆ ಹೇಳುತ್ತೇನೆ. ಇದರಿಂದ ಕನಿಷ್ಠ ನನ್ನ ಮನೆಯನ್ನು ನಡೆಸಲು ಸಾಧ್ಯವಾಗುತ್ತದೆ. ಹಾಗೆಂದು ನಾನು ಇಡೀ ದಿನ ವ್ಯಾಪಾರವನ್ನು ಅವಲಂಬಿಸಲಾರೆ ಎಂದು ವಿಶಾಲ್ ಹೇಳಿದ್ದಾರೆ.

    ನನ್ನ ಕನಸು ಬಹಳ ದೊಡ್ಡದು
    ನನ್ನ ಕನಸು ಬಹಳ ದೊಡ್ಡದು ಎನ್ನುತ್ತಾರೆ ವಿಶಾಲ್. “ನನ್ನ ಕನಸು ತುಂಬಾ ದೊಡ್ಡದಾಗಿದೆ. ಹಾಗಾಗಿ ವ್ಯಾಪಾರವು ನಮ್ಮ ಎಲ್ಲಾ ಕನಸುಗಳು ನನಸಾಗುವ ವೇದಿಕೆಯಾಗಿದೆ” ಎಂದು ನಾನು ಭಾವಿಸಿದೆ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದೇನೆ ಎಂದ ಅವರು, ಹಣ ಬರಲು ಆರಂಭಿಸಿದಾಗ ಮತ್ತೊಂದು ಕಡೆ ಹಣ ಹೋಗಿದ್ದರೆ ಇಲ್ಲಿ ಬರಲಿದೆ ಎಂಬ ವಿಶ್ವಾಸ ಮೂಡಿತು ಎಂದು ಹೇಳಿದ್ದಾರೆ.

    12ನೇ ತರಗತಿ ಪಾಸ್​​​
    “12 ನೇ ತರಗತಿವರೆಗೆ ಮಾತ್ರ ಓದಿದ್ದೇನೆ. ನಾನು ಬಿಎ ಎಲ್‌ಎಲ್‌ಬಿಗೆ ಪ್ರವೇಶ ಪರೀಕ್ಷೆಯನ್ನು ಬರೆದಿದ್ದೆ. ಆದರೆ ನನಗೆ ಅಧ್ಯಯನದಲ್ಲಿ ನಿಜವಾಗಿಯೂ ಆಸಕ್ತಿ ಇರಲಿಲ್ಲ. ನನ್ನ ಸಂಪೂರ್ಣ ಗಮನ ಹಣ ಗಳಿಸುವುದರ ಮೇಲೆ ಮಾತ್ರ” ಎಂದು ವಿಶಾಲ್ ಹೇಳಿದ್ದಾರೆ.

    1 ರಾತ್ರಿಗೆ 7 ಲಕ್ಷ ರೂ…ಹೋಟೆಲ್‌ ಬಾಡಿಗೆಗೆ ನೀರಿನಂತೆ ಹಣ ಖರ್ಚು ಮಾಡಲು ಜನ ರೆಡಿ, ಆದ್ರೆ ರೂಂ ಸಿಗುತ್ತಿಲ್ಲ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts